ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ ಮಾದರಿ ಕ್ಷೇತ್ರವನ್ನಾಗಿಸುವ ಧ್ಯೇಯ: ಸಾಗರ ಖಂಡ್ರೆ

ಭಾಲ್ಕಿ ತಾಲ್ಲೂಕಿನ ವಿವಿಧ ಮಠಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಭೇಟಿ
Published 26 ಮಾರ್ಚ್ 2024, 14:03 IST
Last Updated 26 ಮಾರ್ಚ್ 2024, 14:03 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನ ಭಾತಂಬ್ರಾ, ಹಲಬರ್ಗಾ ಮತ್ತು ಮಳಚಾಪುರ ಗ್ರಾಮದ ಮಠಗಳಿಗೆ ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಭೇಟಿ ನೀಡಿ ಮಠಾಧೀಶರ ಆಶೀರ್ವಾದ ಪಡೆದರು.

ಭಾತಂಬ್ರಾ ಗ್ರಾಮದ ನಿರಂಜನ ಸಂಸ್ಥಾನ ಮಠಕ್ಕೆ ಭೇಟಿ ನೀಡಿದ ಅವರು, ಶಿವಯೋಗೀಶ್ವರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ನಂತರ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಮಠಕ್ಕೆ ತೆರಳಿ ಹಾವಗಿಲಿಂಗೇಶ್ವರ ಶಿವಾಚಾರ್ಯ ಅವರನ್ನು ಸನ್ಮಾನಿಸಿ, ಆಶೀರ್ವಾದ ಪಡೆದರು.

ಮಳಚಾಪುರ ಗ್ರಾಮದ ಶಂಭುಲಿಂಗಾಶ್ರಮಕ್ಕೆ ಮಂಗಳವಾರ ಭೇಟಿ ನೀಡಿದ ಸಾಗರ್ ಖಂಡ್ರೆ ಅವರು ಸದೃಪಾನಂದ ಸ್ವಾಮೀಜಿ ಆಶೀರ್ವಾದ ಪಡೆದರು.

ನಂತರ ಮಾತನಾಡಿದ ಅವರು, ಬೀದರ್ ಕ್ಷೇತ್ರ ಶೈಕ್ಷಣಿಕ, ನೀರಾವರಿ, ಮೂಲಸೌಕರ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕಿದೆ. ಈ ಹಿನ್ನೆಲೆಯಲ್ಲಿ ನನ್ನದೇ ಶೈಲಿಯ ಅಭಿವೃದ್ಧಿ ಧ್ಯೇಯ ಇಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಭಾತಂಬ್ರಾ ಗ್ರಾ.ಪಂ. ಅಧ್ಯಕ್ಷ ವಿಜಯಕುಮಾರ ಗಾಮಾ, ಸದಸ್ಯರಾದ ಜೈರಾಜ ಪಾಟೀಲ, ಮಹಾಂತೇಶ ಪಾಟೀಲ, ವಿಶ್ವ ಹೂಗಾರ, ಶಂಕರ ಗುಬ್ಬೆ, ಮಹಾದೇವ ಬೇಲೂರೆ, ರವೀಂದ್ರ ಚಿಡಗುಪ್ಪೆ, ಹಲಬರ್ಗಾದ ಶರಣಯ್ಯ ಸ್ವಾಮಿ, ಮಲ್ಲಿಕಾರ್ಜುನ ಚಲುವಾ, ರಮೇಶ ಪ್ರಭಾ, ಧನರಾಜ ಪಾಟೀಲ, ಸಂಜು ಪ್ರಭಾ, ಮಳಚಾಪುರದ ರಾಜಕುಮಾರ ಪಾಟೀಲ, ಪಂಡರಿನಾಥ ಪಾಟೀಲ, ಶಾಮರಾವ ಪಾಟೀಲ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT