ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಅಯಾಜ್ ಖಾನ್‌ಗೆ ಕಾಂಗ್ರೆಸ್ ಟಿಕೆಟ್ ನೀಡಲು ಆಗ್ರಹ

Published 4 ಮಾರ್ಚ್ 2024, 16:20 IST
Last Updated 4 ಮಾರ್ಚ್ 2024, 16:20 IST
ಅಕ್ಷರ ಗಾತ್ರ

ಬೀದರ್: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಿಂದ ಮುಖಂಡ ಅಯಾಜ್ ಖಾನ್ ಅವರಿಗೆ ಕಾಂಗ್ರೆಸ್ ಟಿಕೆಟ್‌ ನೀಡಬೇಕು' ಎಂದು ಜಿಲ್ಲಾ ಕುಲ್ ಜಮಾತಿ ಅಧ್ಯಕ್ಷ ಮುಫ್ತಿ ಅಬ್ದುಲ್ ಗಫಾರ್ ಒತ್ತಾಯಿಸಿದ್ದಾರೆ.

'ಶೀಘ್ರದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ ಅಲ್ಪಸಂಖ್ಯಾತರಿಗೆ ಬೀದರ್ ಟಿಕೆಟ್ ನೀಡುವಂತೆ ಮನವಿ ಮಾಡಲಾಗುವುದು ' ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರಿ.

ಮಜ್ಲಿಸ್‌–ಉಲ್‌–ಉಲ್ಮಾ ಅಲ್‌ ಹುಫಾಜ ಸಂಘಟನೆ ಜಿಲ್ಲಾ ಅಧ್ಯಕ್ಷ ಅಬ್ದುಲ್‍ ಗನಿ ಮಾತನಾಡಿ, ‘ಅಲ್ಪಸಂಖ್ಯಾತರು ನಿರಂತರ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದಾರೆ. ಹೀಗಾಗಿ ಪಕ್ಷದ ಟಿಕೆಟ್ ಕೇಳುವುದು ನಮ್ಮ ಹಕ್ಕಾಗಿದೆ. ಅಯಾಜ್‍ಖಾನ್, ಅಬ್ದುಲ್ ಮನ್ನಾನ್ ಸೇಠ್, ಮಕ್ಸೂದ್‍ ಚಂದಾ ಇವರಲ್ಲಿ ಯಾರಿಗೆ ಟಿಕೆಟ್‍ ಕೊಟ್ಟರೂ ಸಂತಸ' ಎಂದು ಹೇಳಿದರು.

ಮುಖಂಡರಾದ ಉಮರ್ ಖುರೇಶಿ, ಎಹತೆ ಶಾಮ್‍ ಉಲ್ ಹಕ್, ಅಲ್ಲಾಬಕ್ಷ, ಇಫ್ತೆಕಾರ್ ಹುಸೇನ್, ಸಗೀರ್, ರಫಿಕ್ ಹಾಗೂ ಮನ್ಸೂರ್‌ ಅಹಮ್ಮದ್‍ ಖಾದ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT