ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡಿಗೆ, ಓಟದಲ್ಲಿ ಚಿನ್ನ ಗೆದ್ದ ಮಮಿತಾಬಾಯಿ

Published 27 ಮೇ 2024, 16:00 IST
Last Updated 27 ಮೇ 2024, 16:00 IST
ಅಕ್ಷರ ಗಾತ್ರ

ಬೀದರ್: ಪ್ಯಾನ್ ಇಂಡಿಯಾ ಮಾಸ್ಟರ್ಸ್ ಗೇಮ್ಸ್ ಫೆಡರೇಷನ್ ವತಿಯಿಂದ ಹೈದರಾಬಾದ್‍ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪ್ರಥಮ ಫೆಡರೇಷನ್ ಕಪ್ ನ್ಯಾಷನಲ್ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದು ತಾಲ್ಲೂಕಿನ ಅಮಲಾಪುರದ ಮಮಿತಾಬಾಯಿ ಕದ್ರೆ ಉತ್ತಮ ಸಾಧನೆ ತೋರಿದ್ದಾರೆ.

ಕರ್ನಾಟಕವನ್ನು ಪ್ರತಿನಿಧಿಸಿದ ಅವರು 3 ಕಿ.ಮೀ. ನಡಿಗೆ, 800 ಮೀಟರ್ ಓಟದಲ್ಲಿ ಚಿನ್ನ ಹಾಗೂ ಮೂರು ಕಿ.ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಆಸ್ಟ್ರೆಲಿಯಾದಲ್ಲಿ ನಡೆಯಲಿರುವ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ಗೆ ಅರ್ಹತೆ ಗಳಿಸಿದ್ದಾರೆ. ಮೂಲತಃ ಅಮಲಾಪುರದ ನಿವಾಸಿಯಾಗಿರುವ ಅವರು ಎರಡು ಮಕ್ಕಳ ತಾಯಿ. 37 ವರ್ಷದ ಮಮಿತಾಬಾಯಿ ಬೆಂಗಳೂರಿನ ಕೇಂದ್ರ ಕಾರಾಗೃಹದ ಮುಖ್ಯ ವೀಕ್ಷಕಿ. ಕೇಂದ್ರ ಕಾರಾಗೃಹದ ಮುಖ್ಯ ಸೂಪರಿಟೆಂಡೆಂಡ್‌ ವಿ. ಶೇಷಮೂರ್ತಿ, ಎಸ್‍ಪಿಗಳಾದ ಮಲ್ಲಿಕಾರ್ಜುನ ಸ್ವಾಮಿ, ಎ.ಎಸ್. ಅನಿತಾ ಅವರ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT