ಮಂಗಳವಾರ, ನವೆಂಬರ್ 12, 2019
28 °C

ಕಲ್ಯಾಣ ಕರ್ನಾಟಕಕ್ಕೆ ಪಾಟೀಲರ ಕೊಡುಗೆ ಅಪಾರ: ಪ್ರಾಧ್ಯಾಪಕ ಡಾ.ಗವಿಸಿದ್ದಪ್ಪ ಪಾಟೀಲ

Published:
Updated:

ಹುಮನಾಬಾದ್: ‘ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ ಮಾಜಿ ಸಚಿವ ದಿ.ವೈಜನಾಥ ಪಾಟೀಲರ ಕೊಡುಗೆ ಅಪಾರ’ ಎಂದು ಪ್ರಾಧ್ಯಾಪಕ ಡಾ.ಗವಿಸಿದ್ದಪ್ಪ ಪಾಟೀಲ ಅಭಿಪ್ರಾಯಪಟ್ಟರು.

ಪಟ್ಟಣದ ಅಗಡಿ ವಾಣಿಜ್ಯ ಸಂಕೀರ್ಣದಲ್ಲಿ ವಿವಿಧ ಸಂಘಟನೆಗಳು ಸಾಹಿತಿಗಳು ಶನಿವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ಮಾಜಿ ಸಚಿವ ದಿ.ವೈಜನಾಥ ಪಾಟೀಲ ಅಪ್ರತಿಮ ರಾಜಕಾರಣಿ, ಸಮಾಜದ ಹಿತ ಚಿಂತಕರಾಗಿ ಸಿದ್ಧಾಂತಕ್ಕೆ ಬದ್ಧರಾಗಿ ಬದುಕಿದರು ಎಂದು ತಿಳಿಸಿದರು.
ವೈಜನಾಥ ಪಾಟೀಲ ಅವರು 1996ರಿಂದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 371ನೇ ಕಲಂ ಜಾರಿಗೊಳಿಸಬೇಕು ಎಂದು ಅವಿರತವಾಗಿ ಹೋರಾಡಿದರು. ಅವರ ಹೋರಾಟದ ಫಲವಾಗಿಯೇ 371 ಜೆ ಜಾರಿಯಾಯಿತು. ಅವರನ್ನು ಕಳೆದುಕೊಂಡು ಕಲ್ಯಾಣ ಕರ್ನಾಟಕ ಬಡವಾಗಿದೆ ಎಂದರು.

ಕಾಶಿನಾಥ ರಡ್ಡಿ, ಐಎಸ್ ಶಕೀಲ, ಶಾಂತವೀರ ಯಲಾಲ್, ರವೀಂದ್ರಕುಮಾರ ಭಂಡಾರಿ, ಈಶ್ವರ ತಡೋಳಾ, ಶಿವರಾಜ ಮೇತ್ರೆ, ಉಮೇಶ ಮಠದ, ರಾಚಯ್ಯ ಸ್ವಾಮಿ ಹಾಗೂ ಸುರೇಶ ಮುಸ್ತರ್ಗಿ

ಪ್ರತಿಕ್ರಿಯಿಸಿ (+)