ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಟಗುಪ್ಪ: ಮಾ.14ರಿಂದ ರಾಚಣ್ಣ ಸ್ವಾಮಿ ಜಾತ್ರೋತ್ಸವ

Published 12 ಮಾರ್ಚ್ 2024, 13:53 IST
Last Updated 12 ಮಾರ್ಚ್ 2024, 13:53 IST
ಅಕ್ಷರ ಗಾತ್ರ

ಚಿಟಗುಪ್ಪ: ಸಮೀಪದ ತೆಲಂಗಾಣದ ಜಹೀರಾಬಾದ್‌ ತಾಲ್ಲೂಕಿನ ಬಡಂಪೇಟ್‌ ಗ್ರಾಮದಲ್ಲಿ ಐತಿಹಾಸಿಕ ರಾಚಣ್ಣ ಸ್ಚಾಮಿ, ಭದ್ರಕಾಳಿ, ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ಅವರ ಜಾತ್ರಾಮಹೋತ್ಸವವು ಗುರುವಾರದಿಂದ ಶನಿವಾರದವರೆಗೆ ಸಂಭ್ರಮದಿಂದ ಜರುಗಲಿದೆ.

ಗುರುವಾರ ಬೆಳಿಗ್ಗೆ ಧ್ವಜಾರೋಹಣ, ಶಿಖರಪೂಜೆ, ಅಗ್ನಿಕುಂಡ ಪೂಜಾ ಕಾರ್ಯಕ್ರಮಗಳು ವೇದಾಧ್ಯಯನಗಳ ಮೂಲಕ ವೀರಶೈವ ಸಿದ್ಧಾಂತದಂತೆ ನಡೆಯುತ್ತವೆ.

ಶುಕ್ರವಾರ ಪುರವಂತರ ಪುರವಂತಿಗೆ, ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವವು ಪ್ರದಕ್ಷಿಣೆ ಹಾಕುವ ಮೂಲಕ ನಡೆಯುತ್ತದೆ. ನಂತರ ಭಕ್ತರಿಂದ ಅಗ್ನಿಕುಂಡದಲ್ಲಿ ಕೆಂಡ ಹಾಯುವ ಕಾರ್ಯ ಆರಂಭವಾಗುತ್ತದೆ.

ಶನಿವಾರ ಭದ್ರಕಾಳಿ, ರಾಚಣ್ಣ ಸ್ವಾಮಿ ಕಲ್ಯಾಣ ಮಹೋತ್ಸವ ನಡೆಯುತ್ತದೆ. ನಂತರ ರಾಚಣ್ಣ ದೇವರಿಗೆ ಅಶ್ವವಾಹನ ಸೇವೆ ಜರುಗುತ್ತದೆ. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ, ವಿದ್ಯುತ್‌ ದೀಪಾಲಂಕಾರ, ಡೊಳ್ಳು ಕುಣಿತ, ಸಿಡಿಮದ್ದುಗುಂಡುಗಳ ಚಿತ್ತಾರಗಳೊಂದಿಗೆ ಜರುಗುತ್ತದೆ. ನಂತರ ರಾತ್ರಿ ಸಂಗೀತ ಕಲಾವಿದರಿಂದ ರಾತ್ರಿ ಭಜನಾ ಕಾರ್ಯಕ್ರಮ ನಡೆದು ಮುಂಜಾವಿನಲ್ಲಿ ದೇವರಿಗೆ ಮಂಗಳಾರತಿ ಬೆಳಗುವ ಮೂಲಕ ಜಾತ್ರೆಗೆ ಮುಕ್ತಾಯಗೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT