ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ನಲ್ಲಿ ಧಾರಾಕಾರ ಮಳೆ

Published 7 ಜೂನ್ 2024, 15:27 IST
Last Updated 7 ಜೂನ್ 2024, 15:27 IST
ಅಕ್ಷರ ಗಾತ್ರ

ಬೀದರ್‌: ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಶುಕ್ರವಾರ ಧಾರಾಕಾರ ಮಳೆಯಾಯಿತು.

ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಗುಡುಗು ಸಹಿತ ಆರಂಭಗೊಂಡ ಮಳೆ 4.30ರ ವರೆಗೆ ಧಾರಾಕಾರವಾಗಿ ಸುರಿಯಿತು. ಆನಂತರ ತುಂತುರು ಹನಿಗಳು ಉದುರಿದವು. ಧಾರಾಕಾರ ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸಂಚಾರ ನಿಧಾನಗೊಂಡಿತು. ಸತತ ಮೂರನೇ ದಿನವೂ ಮಳೆಯಾಗಿರುವುದರಿಂದ ವಾತಾವರಣ ಸಂಪೂರ್ಣ ತಂಪಾಗಿದೆ.

ತಾಲ್ಲೂಕಿನ ಅಮಲಾಪುರ, ಚಿಟ್ಟಾವಾಡಿ, ಚಿಟ್ಟಾ, ಗೋರನಳ್ಳಿ, ಗುನ್ನಳ್ಳಿ, ಘೋಡಂಪಳ್ಳಿ, ಶಹಾಪುರ, ಅಯಾಸಪುರ, ಯದಲಾಪುರ, ಯಾಕತಪುರ, ಮನ್ನಳ್ಳಿ, ಸಿಂದೋಲ್‌, ಅಷ್ಟೂರ, ಕಂಗಟಿ ಸೇರಿದಂತೆ ಹಲವೆಡೆ ಮಳೆಯಾಗಿದೆ. ಭಾಲ್ಕಿ ಪಟ್ಟಣ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲೂ ವರ್ಷಧಾರೆಯಾಗಿದೆ. ಮಿಕ್ಕುಳಿದ ತಾಲ್ಲೂಕುಗಳಲ್ಲಿ ಕಾರ್ಮೋಡ ಕವಿದಿತ್ತು.

ಹಲಸಿ: ಸಿಡಿಲು ಬಡಿದು ಎತ್ತು ಸಾವು

ಭಾಲ್ಕಿ: ತಾಲ್ಲೂಕಿನ ಹಲಸಿ ಗ್ರಾಮದ ರೈತ ವಿದ್ಯವಾನ ಗದಿಗೆಪ್ಪ ಪಾಟೀಲ ಅವರ ಹೊಲದಲ್ಲಿ ಸಿಡಿಲು ಬಡಿದು ಎತ್ತು ಸಾವನ್ನಪ್ಪಿದೆ.

ರೈತ ವಿದ್ಯವಾನ ತಮ್ಮ ಹೊಲದಲ್ಲಿ ಕೆಲಸ ಮಾಡುವ ವೇಳೆ ಗುರುವಾರ ಸಂಜೆ ಮಳೆ ಸುರಿಯಲಾರಂಭಿಸಿದೆ. ಆಗ ದನ ಕರುಗಳನ್ನು ಕೊಟ್ಟಿಗೆಯತ್ತ ತರುವಾಗ ಸಿಡಿಲು ಬಡಿದು ಎತ್ತು ಸ್ಥಳದಲ್ಲಿಯೇ ಸಾವನ್ನಪ್ಪಿದೆ.

ಲಾಧಾ ಗ್ರಾಮದ ಪಶು ಚಿಕಿತ್ಸಾಲಯ ವೈದ್ಯಾಧಿಕಾರಿ ಖೂಬಾ ಮರಣೋತ್ತರ ಪರೀಕ್ಷೆ ನಡೆಸಿದರು. ಮೆಹಕರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಬೀದರ್‌ನ ಗುಂಪಾ ವೃತ್ತದಲ್ಲಿ ಸುರಿವ ಮಳೆಯಲ್ಲೇ ವಾಹನಗಳು ಸಾಗಿದವು
–ಪ್ರಜಾವಾಣಿ ಚಿತ್ರಗಳು
ಬೀದರ್‌ನ ಗುಂಪಾ ವೃತ್ತದಲ್ಲಿ ಸುರಿವ ಮಳೆಯಲ್ಲೇ ವಾಹನಗಳು ಸಾಗಿದವು –ಪ್ರಜಾವಾಣಿ ಚಿತ್ರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT