ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಗರ ಸಂಭ್ರಮದಿಂದ ರೋಟರಿ ರಜತ ಮಹೋತ್ಸವ

Published 5 ಡಿಸೆಂಬರ್ 2023, 7:09 IST
Last Updated 5 ಡಿಸೆಂಬರ್ 2023, 7:09 IST
ಅಕ್ಷರ ಗಾತ್ರ

ಬೀದರ್‌: ರೋಟರಿ ಕ್ಲಬ್‌ ಬೀದರ್‌ ಫೋರ್ಟ್‌ ರಜತ ಮಹೋತ್ಸವವನ್ನು ಸಡಗರ, ಸಂಭ್ರಮದಿಂದ ನಗರದಲ್ಲಿ ಇತ್ತೀಚೆಗೆ ಆಚರಿಸಲಾಯಿತು.

ಇದೇ ವೇಳೆ ರೋಟರಿ ಕ್ಲಬ್‌ ಬೀದರ್‌ ಸಿಲ್ವರ್‌ ಸ್ಟಾರ್‌ 9ನೇ ಶಾಖೆಗೆ ಚಾಲನೆ ನೀಡಲಾಯಿತು. ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ‘ಸಪ್ತ ಸಂಕಲ್ಪ’ ಕಾರ್ಯಕ್ರಮ ಉದ್ಘಾಟಿಸಿ, ರೋಟರಿ ಕ್ಲಬ್‌ ಅನೇಕ ಜನಪರ ಕೆಲಸಗಳನ್ನು ಸಮಾಜಮುಖಿಯಾಗಿ ಮಾಡುತ್ತಿದೆ. ಸರ್ಕಾರದ ಜೊತೆಗೆ ಇಂತಹ ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿರುವುದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತಿದೆ ಎಂದು ಹೇಳಿದರು.

ರೋಟರಿ ಕ್ಲಬ್‌ ಬೀದರ್‌ ಘಟಕಕ್ಕೆ 25 ವರ್ಷ ತುಂಬಿರುವುದು ಸಂತಸದ ಸಂಗತಿಯಾಗಿದೆ. ಕಳೆದ 25 ವರ್ಷಗಳಲ್ಲಿ ಜಿಲ್ಲೆಯಲ್ಲಿ ಅನೇಕ ಉತ್ತಮ ಕೆಲಸಗಳಾಗಿವೆ. ಬರುವ ದಿನಗಳಲ್ಲಿಯೂ ಇದೇ ರೀತಿ ಸಮಾಜಮುಖಿ ಕೆಲಸಗಳು ಮುಂದುವರೆಯಲಿ. ಅದಕ್ಕೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಮಾತನಾಡಿ, ಹಲವು ರಂಗಗಳಲ್ಲಿ ರೋಟರಿ ಕ್ಲಬ್‌ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಇದರ ಕಾರ್ಯಗಳು ಇನ್ನಷ್ಟು ವಿಸ್ತರಿಸಿ ಸಮಾಜಕ್ಕೆ ಉತ್ತಮವಾಗಲಿ ಎಂದು ಶುಭ ಹಾರೈಸಿದರು.

ರೋಟರಿ ಕ್ಲಬ್‌ ಸೆವೆನ್‌ ಏರಿಯಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ತಾಯಿ ಮತ್ತು ಮಕ್ಕಳ ಆರೋಗ್ಯ, ಮೂಲಭೂತ ಶಿಕ್ಷಣ, ಸಾಕ್ಷರತೆ, ಸಮುದಾಯದ ಆರ್ಥಿಕ ಪ್ರಗತಿ, ರೋಗಗಳನ್ನು ತಡೆಗಟ್ಟಿ ಉಪಚಾರ ಮಾಡುವುದು, ಶಾಂತಿ ಸ್ಥಾಪನೆ ಮತ್ತು ಸಂಘರ್ಷ ತಡೆಯುವುದು, ಕುಡಿಯುವ ನೀರು ಮತ್ತು ಸ್ವಚ್ಛತೆ, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ವಲಯಗಳಲ್ಲಿ ರೋಟರಿ ಕ್ಲಬ್‌ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಅಂತರರಾಷ್ಟ್ರೀಯ ರೊಟೇರಿಯನ್‌ ರಾಜು ಸುಬ್ರಮಣಿಯಂ, ರೊಟೇರಿಯನ್‌ ರವಿಶಂಕರ ಡಾಕೋಜು, ರೋಟರಿ ಕ್ಲಬ್‌ನ ಪಲ್ಸ್‌ ಪೋಲಿಯೋ ವಿಭಾಗದ ಜಿಲ್ಲಾಧ್ಯಕ್ಷ ರವಿ ಮೂಲಗೆ, ವಿಚಾರ ಸಂಕಿರಣದ ಅಧ್ಯಕ್ಷ ಡಾ. ರಘು ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಹಾವಶೆಟ್ಟಿ ಪಾಟೀಲ, ರೋಟರಿ ಕ್ಲಬ್‌ ಆಫ್‌ ಬೀದರ್‌ ಫೋರ್ಟಿನ ಕಾರ್ಯದರ್ಶಿ ಗುಂಡಪ್ಪಾ ಗೋಧೆ, ರೋಟರಿ ಕ್ಲಬ್‌ ಬೀದರ್‌ ಕ್ವೀನ್ಸ್‌ ಅಧ್ಯಕ್ಷೆ ರುಚಿಕಾ ಷಾ, ರೋಟರಿ ಕ್ಲಬ್‌ ಬೀದರ್‌ ಅಧ್ಯಕ್ಷ ಚಂದ್ರಕಾಂತ ಕಾಡಾದಿ, ರೋಟರಿ ಕ್ಲಬ್‌ ಬೀದರ್‌ ಸಿಲ್ವರ್‌ ಸ್ಟಾರ್‌ನ ಉಪಾಧ್ಯಕ್ಷ ಆದೀಶ್‌ ವಾಲಿ, ಸಹ ಕಾರ್ಯದರ್ಶಿ ಸ್ಫೂರ್ತಿ ಧನ್ನೂರ, ಡಾ. ಕಪಿಲ್‌ ಪಾಟೀಲ ಹಾಜರಿದ್ದರು.

ಗ್ರಾಮೀಣ ಭಾಗದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ 300 ಬೈಸಿಕಲ್‌ಗಳನ್ನು ಉಚಿತವಾಗಿ ವಿತರಿಸಲಾಯಿತು. ಬೀದರ್‌ ಜಿಲ್ಲೆಯ 180, ಕಲಬುರಗಿಯ 120 ವಿದ್ಯಾರ್ಥಿನಿಯರಿಗೆ ನೀಡಲಾಯಿತು. ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಬೈಸಿಕಲ್‌ಗಳನ್ನು ವಿತರಿಸಿದರು.

ಬೀದರ್‌ನಲ್ಲಿ ಏರ್ಪಡಿಸಿದ್ದ ರೋಟರಿ ಕ್ಲಬ್‌ ರಜತ ಮಹೋತ್ಸವ ಕಾರ್ಯಕ್ರಮವನ್ನು ಕೇಂದ್ರ ಸಚಿವ ಭಗವಂತ ಖೂಬಾ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಉದ್ಘಾಟಿಸಿದರು
ಬೀದರ್‌ನಲ್ಲಿ ಏರ್ಪಡಿಸಿದ್ದ ರೋಟರಿ ಕ್ಲಬ್‌ ರಜತ ಮಹೋತ್ಸವ ಕಾರ್ಯಕ್ರಮವನ್ನು ಕೇಂದ್ರ ಸಚಿವ ಭಗವಂತ ಖೂಬಾ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಉದ್ಘಾಟಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT