ಸೋಮವಾರ, ಡಿಸೆಂಬರ್ 5, 2022
19 °C

ತೊಗರಿಗೆ ನೆಟೆ ರೋಗ ಬಾಧೆ: ವಿಜ್ಞಾನಿಗಳ ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ತೊಗರಿಯಲ್ಲಿ ನೆಟೆ ರೋಗ ಬಾಧೆ ಕಂಡು ಬಂದಿದೆ.

ಜನವಾಡ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ನಡೆಸಿದ ಸಮೀಕ್ಷೆ ವೇಳೆ ಬೀದರ್ ತಾಲ್ಲೂಕಿನ ಚಾಂಬೋಳ, ಚಿಮಕೋಡ್, ಹುಮನಾಬಾದ್ ತಾಲ್ಲೂಕಿನ ಸಿಂದಬಂದಗಿ, ಹುಡಗಿ, ಚಿಟಗುಪ್ಪ ತಾಲ್ಲೂಕಿನ ನಿರ್ಣಾ, ಮುತ್ತಂಗಿ, ಭಾಲ್ಕಿ ತಾಲ್ಲೂಕಿನ ಹಲಬರ್ಗಾ, ಬಸವಕಲ್ಯಾಣ ತಾಲ್ಲೂಕಿನ ಘಾಟಬೋರಾಳ, ಹಂದ್ರಾಳ ಗ್ರಾಮಗಳ ಕೆಲ ರೈತರ ಹೊಲಗಳಲ್ಲಿ ತೊಗರಿಯಲ್ಲಿ ನೆಟೆ ರೋಗ ಕಾಣಿಸಿದೆ.

ನೆಟೆ ರೋಗ ಫ್ಯೂಸೆರಿಯಂ ಉಡಂ ಶಿಲೀಂಧ್ರದಿಂದ ಹರಡುತ್ತದೆ. ರೋಗದಿಂದ ಬೇರು, ಕಾಂಡಕ್ಕೆ ನೀರು ಸಾಗಿಸುವ ಹಾಗೂ ಆಹಾರ ಸರಬರಾಜು ಮಾಡುವ ಕೊಳವೆ ಕ್ರಿಯೆ ಕುಂಠಿತಗೊಳ್ಳುತ್ತದೆ. ಗಿಡದ ಕಾಂಡದ ಮೇಲೆ ಗುಲಾಬಿ ವರ್ಣದ ಮಚ್ಛೆ ಕಾಣುತ್ತದೆ. ಕಾಂಡ ಸೀಳಿದಾಗ ಕಂದು ಬಣ್ಣದ ಗೆರೆಯಂತಹ ಲಕ್ಷಣಗಳು ಕಾಣಿಸುತ್ತವೆ. ಬಾಧೆ ತೀವ್ರವಾದಲ್ಲಿ ಗಿಡ ಸಂಪೂರ್ಣವಾಗಿ ಒಣಗುತ್ತದೆ ಎಂದು ತಂಡದ ನೇತೃತ್ವ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ ಸುನೀಲಕುಮಾರ ಎನ್.ಎಂ. ಹೇಳಿದರು.

ರೋಗದ ನಿರ್ವಹಣೆಗಾಗಿ ಕಾರ್ಬೆಂಡೈಜಿಮ್+ಮ್ಯಾಂಕೊಜೇಬ್ ಅಥವಾ ಕ್ಯಾಪ್ಟನ್ + ಹೆಕ್ಸಾಕೊನೊಜೊಲ್ ಸಂಯುಕ್ತ ಶಿಲೀಂಧರ್ರನಾಶಕ ಅಥವಾ ಕಾರ್ಬೆಂಡೈಜಿಮ್ ಪ್ರತಿ ಲೀಟರ್ ನೀರಿಗೆ 2 ಗ್ರಾಂ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.