ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ‘ಹಿರಿಯರು ಹಠಮಾರಿ ಧೋರಣೆ ಬಿಡಲಿ’

Published 30 ಡಿಸೆಂಬರ್ 2023, 7:31 IST
Last Updated 30 ಡಿಸೆಂಬರ್ 2023, 7:31 IST
ಅಕ್ಷರ ಗಾತ್ರ

ಬೀದರ್‌: ‘ಹಿರಿಯರಾದವರು ಹಠಮಾರಿತನ ಧೋರಣೆ ಬಿಟ್ಟು ಯೋಗ, ಧ್ಯಾನ, ಪ್ರಾಣಾಯಾಮ
ಮಾಡುವುದರ ಮೂಲಕ ಆರೋಗ್ಯವನ್ನು ಕಾಯ್ದುಕೊಳ್ಳಬೇಕು’ ಎಂದು ಸಾಹಿತಿ ಎಂ.ಜಿ. ದೇಶಪಾಂಡೆ ಹೇಳಿದರು.

ಜೈ ಹಿಂದ್ ಹಿರಿಯ ನಾಗರಿಕರ ಸಂಘದಿಂದ ನಗರದಲ್ಲಿ ಶುಕ್ರವಾರ ‘ಸಮಾಜದಲ್ಲಿ ಹಿರಿಯರ ಪಾತ್ರ‘ ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಭಾಗವಹಿಸಿ ಮಾತನಾಡಿದರು.

ಯಾರಾದರೂ ಕೇಳಿದರೆ ಹಿರಿಯರು ತಮ್ಮ ಅನುಭವವನ್ನು ಹಂಚಿಕೊಳ್ಳಬೇಕು. ಕಿರಿಯರಿಗೆ ಅನವಶ್ಯಕವಾಗಿ ವಿವರಿಸಬೇಕಾಗಿಲ್ಲ. ಅವರಿಗೆ ಅದು ಇಷ್ಟವಾಗುವುದಿಲ್ಲ. ಕುಟುಂಬದ ಸದಸ್ಯರ ಮೇಲೆ ವಿನಾಕಾರಣ ಅಧಿಕಾರ ಚಲಾಯಿಸುವುದನ್ನು ಬಿಟ್ಟು ಅವರ ಜೊತೆಗೆ ಒಳ್ಳೆಯ ಸಂಬಂಧ ಹೊಂದಿದರೆ ಅವರಿಂದ ಸಕಾರಾತ್ಮಕ ಸಹಕಾರ ಪಡೆಯಬಹುದಾಗಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ವೀರಭದ್ರಪ್ಪ ಉಪ್ಪಿನ ಅವರು ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಗುರುತಿನ ಚೀಟಿಗಳನ್ನು ವಿತರಿಸಿದರು. ಉಪಾಧ್ಯಕ್ಷ ವಿಜಯಕುಮಾರ್ ಸೂರ್ಯನ್‌, ರಾಮಕೃಷ್ಣ ಮುನಿಗ್ಯಾಲ, ಗಂಗಪ್ಪ ಸಾವಳೆ, ರಾಜೇಂದ್ರ ಸಿಂಗ್ ಪವಾರ, ಕೆ.ವಿ. ಪಾಟೀಲ, ಮಚೇಂದ್ರ ಎಕಲಾರ್, ಶಿವಪುತ್ರ ಮೆಟಗೆ, ಸಿಮ್ರಾನ್, ಎಂ.ಎನ್. ಕುಲಕರ್ಣಿ, ಸುಭಾಷ್ ಪೋಲಾ, ಸುಧಾಕರ ಗಾದಗಿ, ಅರವಿಂದ ಕುಲಕರ್ಣಿ, ಶಂಕರರಾವ ಚಿದ್ರಿ, ರಾಮಕೃಷ್ಣನ್ ಸಾಳೆ, ದತ್ತಾತ್ರೆಯ ಕುಲಕರ್ಣಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT