ಬುಧವಾರ, ಸೆಪ್ಟೆಂಬರ್ 23, 2020
26 °C
ಅಯೋಧ್ಯೆಯಲ್ಲಿ ಪ್ರಧಾನ ಮಂತ್ರಿ ಮೋದಿಯಿಂದ ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ

ಬೀದರ್‌ ಜಿಲ್ಲೆಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ಶಿಲಾನ್ಯಾಸ ಪ್ರಯುಕ್ತ ನಗರದ ರಾಮ ಮಂದಿರದಲ್ಲಿ ಬುಧವಾರ ವಿಶೇಷ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಯಿತು.

ಶ್ರೀರಾಮನ ಭಾವಚಿತ್ರಕ್ಕೆ ಸಂಸದ ಭಗವಂತ ಖೂಬಾ ಆರತಿ ಬೆಳಗಿದರು. ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಮುಖಂಡರಾದ ಬಾಬು ವಾಲಿ, ಎನ್.ಆರ್.ವರ್ಮಾ, ಬಾಬುರಾವ್ ಕಾರಬಾರಿ, ಗುರುನಾಥ್ ಜ್ಯಾಂತಿಕರ್, ಅಶೋಕ ಹೊಕ್ರಾಣೆ, ಬಸವರಾಜ ಜೋಜನಾ, ಉಪೇಂದ್ರ ದೇಶಪಾಂಡೆ, ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ರಾಜಕುಮಾರ ಚಿದ್ರಿ, ಪ್ರಸನ್ನಲಕ್ಷ್ಮಿ ದೇಶಪಾಂಡೆ, ಸೂರ್ಯಕಾಂತ ಶೆಟಕಾರ್, ಸುನೀಲ ಮೊಟ್ಟಿ, ಸತೀಶ ಮೊಟ್ಟಿ, ಉಪೇಂದ್ರ ದೇಶಪಾಂಡೆ, ನರೇಶ ಗೌಳಿ, ಮದನ್ ಗೌಳಿ, ಗೋಪಾಲ ಕೃಷ್ಣ, ಕಿರಣ್ ಪಾಲಂ, ಸಂಜು ಘನಾತೆ, ಪ್ರಕಾಶ, ಸಂತೋಷ ಪಾಂಡರೆ, ಮಹೇಶ ಕುಲಕರ್ಣಿ, ಮನೋಹರ ದಂಡೆ, ಕಾಶೀನಾಥ ಶೀಲವಂತ, ಬಸವರಾಜ ಮಲ್ಲಕಪ್ಪ, ಕಲ್ಯಾಣರಾವ್ ಬಿರಾದಾರ, ಗುಣವಂತ ಭಾವಿಕಟ್ಟೆ, ಬಸವರಾಜ ಪವಾರ್, ನಗರ ಪ್ರಧಾನ ಕಾರ್ಯದರ್ಶಿ ಸುನೀಲ ಗೌಳಿ, ಅನಿಲ ರಾಜಗೀರಾ ಉಪಸ್ಥಿತರಿದ್ದರು.

ಓಲ್ಡ್‌ಸಿಟಿಯ ರಾಮ ಮಂದಿರದ ಆವರಣದಲ್ಲಿ ಕೇಸರಿ ಧ್ವಜ ಕಟ್ಟಲಾಗಿತ್ತು. ಆವರಣದಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕರ್ತರು ಶ್ರೀರಾಮನ ಪ್ರತಿಮೆಗೆ ಪೂಜೆ ಸಲ್ಲಿಸಿ ಪುಷ್ಪ ಸಮರ್ಪಿಸಿ ಭಕ್ತಿಭಾವ ಮೆರೆದರು. ಜಿಲ್ಲಾಡಳಿತ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಜನ ಪೂಜೆ ಸಲ್ಲಿಸಿದ ನಂತರ ಮನೆಗಳಿಗೆ ತೆರಳಿದರು.

ರಾಮ ಮಂದಿರ ಪ್ರದೇಶದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ನಗರದಲ್ಲಿ ಆಯಕಟ್ಟಿನ ಪ್ರದೇಶಗಳಲ್ಲೂ ಪೊಲೀಸರನ್ನು ನಿಯೋಜಿಸಲಾಗಿತ್ತು. ನಗರದ ಶಹಾಗಂಜ್ ಹನುಮಾನ ಮಂದಿರ, ಕ್ರಾಂತಿ ಗಣೇಶ, ವನವಾಸಿ ರಾಮ ಮಂದಿರ, ವಿದ್ಯಾನಗರ ರಾಮ ಮಂದಿರ, ಶಿವನಗರ ಹನುಮಾನ ಮಂದಿರ, ಹೌಸಿಂಗ್ ಬೋರ್ಡ್ ಶಿವ ಮಂದಿರ, ಗಣೇಶ ಮೈದಾನ, ರಾಮ ಚೌಕ್, ಮಂಗಲಪೇಟ್ ಮಡಿವಾಳ ಮಂದಿರ, ಸಿದ್ಧಾರೂಢ ಮಠ ಹಾಗೂ ದೇವಿ ಮಂದಿರಗಳಲ್ಲಿ ಸಹ ಶ್ರೀರಾಮ ಭಕ್ತರು ವಿಶೇಷ ಪೂಜೆ ಮಾಡಿದರು.

ನಗರದ ಉದಗಿರ ರಸ್ತೆ, ಓಲ್ಡ್‌ಸಿಟಿ ಹಾಗೂ ಗುಂಪಾದ ಅಂಗಡಿ ಮುಂಗಟ್ಟುಗಳ ಮುಂದೆ ಶ್ರೀರಾಮನ ಭಾವಚಿತ್ರವಿರುವ ಧ್ವಜ ಹಾಗೂ ಕೇಸರಿ ಧ್ಜಜ ಕಟ್ಟಲಾಗಿತ್ತು. ಶ್ರೀರಾಮ ಭಕ್ತರು ಕೇಸರಿ ಶಲ್ಯ ಹಾಗೂ ಕೇಸರಿ ತಿಲಕವಿಟ್ಟು ಸಂಭ್ರಮಿಸಿದರು.

ಹಿಂದೂ ಬ್ರಿಗೇಡ್: ನಗರದ ರಾಮಚೌಕ್‌ ಹತ್ತಿರ ಹಿಂದೂ ಬ್ರಿಗೇಡ್ ವತಿಯಿಂದ ಶ್ರೀರಾಮನ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ರವಿ ಕೋಡಗೆ, ಸೀನು ಮಾಶೆಟ್ಟಿ, ಸಂತೋಷ ಭಂಡೆ, ಗಜಾನನ ಹಂಡೆ, ಸಾಯಿ ಪ್ರಶಾಂತ, ಬಸವರಾಜ ಯಲ್ಲಾಲಿಂಗ, ವೀರೇಶ ಗುರು ಇದ್ದರು.

ಭವಾನಿ ಮಂದಿರ: ಹಳ್ಳದಕೇರಿ ಭವಾನಿ ಮಂದಿರದಲ್ಲಿ ಭಕ್ತರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜೈಶ್ರೀರಾಮ ಎಂದು ಜಯಘೋಷ ಕೂಗಿದರು. ಭವಾನಿ ಮಂದಿರದ ಟ್ರಸ್ಟ್ ಅಧ್ಯಕ್ಷ ಕಂಟೆಪ್ಪ ಪಾಟೀಲ, ಮಂದಿರದ ಪೂಜಾರಿ ಸಿದ್ಧಯ್ಯ ಸ್ವಾಮಿ, ಮುಖಂಡರಾದ ಧನರಾಜ ಹಂಗರಗಿ, ಸಂಗಪ್ಪ ಹಣಮಶೆಟ್ಟಿ, ಪವನ ಉಂಡೆ, ಅಶೋಕ ದಿಡಗೆ, ಪಂಢರಿನಾಥ ಯಲ್ಲಾನೋರ್, ರಾಜಕುಮಾರ ಕೊಡ್ಡಿಕರ್, ಲೋಕೇಶ ಬಸಂತಪೂರೆ, ರಾಜಕುಮಾರ ಉಂಡೆ ಮೊದಲಾದವರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಹಿಂದೂ ಜಾಗೃತ ವೇದಿಕೆ: ನಗರದ ನೌಬಾದ್‌ನ ಬಸವೇಶ್ವರ ವೃತ್ತದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಲಾಯಿತು. ದಯಾನಂದ ಸ್ವಾಮಿ, ಶಿವರಾಜ್ ಮಾಳಗೆ, ಸೋಮನಾಥ ಭಂಗೂರೆ, ಗೋರೇಶ ಭಂಗೂರೆ, ಸಚಿನ್ ಹೆಗ್ಗೆ, ಸಂಗು ಹುಮನಾಬಾದೆ, ಮಲ್ಲು ಸೇಠ್‌, ವಿಶಾಲ ಅತಿವಾಳೆ, ಮಹೇಶ ಉಪಸ್ಥಿತರಿದರು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.