ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮಗ ಅಂತ ನನ್ನ ಬೆಂಬಲಿಸಿ: ಪಕ್ಷೇತರ ಅಭ್ಯರ್ಥಿ ರೌಫ್‌ ಅಬ್ದುಲ್‌

Published 3 ಮೇ 2024, 8:45 IST
Last Updated 3 ಮೇ 2024, 8:45 IST
ಅಕ್ಷರ ಗಾತ್ರ

ಬೀದರ್‌: ‘ನಾನು ಹಲವು ವರ್ಷಗಳಿಂದ ಜನರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದೇನೆ. ಈ ಸಲ ಜನಸೇವೆಗೆ ಚುನಾವಣೆಗೆ ನಿಂತಿದ್ದು, ಮನೆ ಮಗ ಅಂತ ಕ್ಷೇತ್ರದ ಜನ ನನ್ನನ್ನು ಬೆಂಬಲಿಸಬೇಕು’ ಎಂದು ಪಕ್ಷೇತರ ಅಭ್ಯರ್ಥಿ ರೌಫ್‌ ಅಬ್ದುಲ್‌ ಗನಿ ಮನವಿ ಮಾಡಿದರು.

‘ನಾನು ಪ್ರಹಾರ ಜನಶಕ್ತಿ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಿದ್ದೆ. ಆದರೆ, ನಾನು ನಾಮಪತ್ರದೊಂದಿಗೆ ಸಲ್ಲಿಸಿದ ದಾಖಲೆಗಳ ಪೈಕಿ ಕೆಲವದರಲ್ಲಿ ತಾಂತ್ರಿಕ ದೋಷಗಳಿಂದ ‘ಬಿ’ ಫಾರಂ ತಿರಸ್ಕಾರಗೊಂಡಿದ್ದು, ನನ್ನನ್ನು ಪಕ್ಷೇತರ ಅಭ್ಯರ್ಥಿಯೆಂದು ಪರಿಗಣಿಸಿದ್ದಾರೆ. ನನ್ನ ಪಕ್ಷ ನನ್ನ ಬೆಂಬಲಕ್ಕೆ ನಿಂತಿದೆ. ಅದೇ ರೀತಿ ಮತದಾರರು ಕೂಡ ಬೆಂಬಲಿಸಬೇಕು’ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

‘ನನಗೆ ಅವಕಾಶ ಸಿಕ್ಕರೆ ಉತ್ತಮ ಕೆಲಸ ಮಾಡಿ ತೋರಿಸುವೆ. ಬಡ ಕುಟುಂಬದಿಂದ ಬಂದವನು ನಾನು. ಬಡವರ ನೋವು ಏನೆಂಬುದು ನನಗೆ ಗೊತ್ತಿದೆ. ಹಣದ ಆಸೆಗೆ ಒಳಗಾಗದೆ ಉತ್ತಮರನ್ನು ಬೆಂಬಲಿಸಿ, ನನ್ನ ಚಿಹ್ನೆ ವಜ್ರ ಎಂದು’ ಹೇಳಿದರು. ಪ್ರಹಾರ ಜನಶಕ್ತಿ ಪಕ್ಷದ ಪ್ರಧಾನ ಕಾರ್ಯದರ್ಶಿ ಗೌತಮ್‌ ಕಾಳೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT