ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್‌ನಿಂದ ರಾಜ್ಯದ ಅಭಿವೃದ್ಧಿ ಕುಂಠಿತ: ಸೂರ್ಯಕಾಂತ್‌ ಮಠಪತಿ

Published 24 ಮೇ 2024, 16:19 IST
Last Updated 24 ಮೇ 2024, 16:19 IST
ಅಕ್ಷರ ಗಾತ್ರ

ಚಿಟಗುಪ್ಪ: ’ಕಾಂಗ್ರೆಸ್‌ ಸರ್ಕಾರದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಯಾವುದೇ ಪ್ರಗತಿ ಕಾಣುತ್ತಿಲ್ಲ’ ಎಂದು ಬಿಜೆಪಿ ಮುಖಂಡ ಸೂರ್ಯಕಾಂತ್‌ ಮಠಪತಿ ಹೇಳಿದರು.

ತಾಲ್ಲೂಕಿನ ಕುಡಂಬಲ್‌, ಮುದನಾಳ, ರಾಮಪುರ್‌, ವಳಖಿಂಡಿ ಗ್ರಾಮಗಳಲ್ಲಿ ವಿಧಾನ‌ ಪರಿಷತ್ ಚುನಾವಣೆಯ ಪದವಿಧರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಅಮರನಾಥ ಪಾಟೀಲ್‌ ಅವರ ಪರ ಮತಯಾಚಿಸಿ ಮಾತನಾಡಿದರು.

ಮುಖಂಡ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ’ಪ್ರಜ್ಞಾವಂತ ಪದವಿಧರ ಮತದಾರರು ರಾಜ್ಯ ದೇಶದ ಸಮಗ್ರ ಪ್ರಗತಿ, ಅಂತರಾಷ್ಟ್ರಿಯ ಮಟ್ಟದಲ್ಲಿ ಭದ್ರತೆಯ ವಿಷಯ ಆಲೋಚಿಸಿ ಬಿಜೆಪಿ ಅಭ್ಯರ್ಥಿಗೆ ಮತಚಲಾಯಿಸಿ ವಿಜೇತರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡರಾದ ಸುಭಾಷ ಕುಂಬಾರ, ರಾಜಗೋಪಾ ಐನಾಪುರ್‌ ಅವರು ಮಾತನಾಡಿ,ʼ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ದಿವಾಳಿಗೊಳಿಸಿದ ಕಾಂಗ್ರೆಸ್‌ ಸರ್ಕಾರ ಕೇವಲ ಅಧಿಕಾರದ ಗದ್ದುಗೆಗಾಗಿ ಮತದಾರರಿಗೆ ಆಮಿಷಗಳ ಯೋಜನೆ ರೂಪಿಸುತ್ತಿದೆ. ಇದರಿಂದ ಮುಂದಿನ ಪೀಳಿಗೆಯ ಮೇಲೆ ಬಹುದೊಡ್ಡ ಪರಿಣಾಮ ಬಿಳುತ್ತದೆ ಎಂದು ನುಡಿದರು.

ಬೀರಪ್ಪ ಮಾರ್ತಾಂಡ, ವೀರಣ್ಣ ಭಂಡಾರಿ, ಶರಣಪ್ಪ, ಸಂಗಪ್ಪ ಕಟಗಿ, ಮುಕುಂದ್, ಸಿರಾಜ್ ಬಂದಗಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT