ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ಮೊಸಳೆ ಸೆರೆ ಹಿಡಿದ ಗಡಿಕುಶನೂರ ಗ್ರಾಮಸ್ಥರು

Published 30 ನವೆಂಬರ್ 2023, 18:36 IST
Last Updated 30 ನವೆಂಬರ್ 2023, 18:36 IST
ಅಕ್ಷರ ಗಾತ್ರ

ಔರಾದ್: ಮಾಂಜ್ರಾ ನದಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಗಡಿ ಕುಶನೂರದಲ್ಲಿ ಕಾಣಿಸಿಕೊಂಡ ಮೊಸಳೆಯನ್ನು ಗ್ರಾಮಸ್ಥರು ಗುರುವಾರ ಸೆರೆ ಹಿಡಿದಿದ್ದಾರೆ.

ಗ್ರಾಮದ ಬಸವೇಶ್ವರ ವೃತ್ತದ ಬಳಿ ಬಂದ ಮೊಸಳೆ ಮೇಲೆ ಗೋಣಿ ಚೀಲ ಹಾಕಿ ಸೆರೆ ಹಿಡಿದಿದ್ದಾರೆ. ಕಳೆದ ಎರಡು ತಿಂಗಳಿನಿಂದ ಆಗಾಗ ಗ್ರಾಮದ ಸುತ್ತ ಮೊಸಳೆ ಜನರ ಕಣ್ಣಿಗೆ ಬಿದ್ದಿದೆ. ವಿಷಯ ಅರಣ್ಯ ಇಲಾಖೆಗೆ ಮುಟ್ಟಿಸಿದರೂ ಅದು ಸಿಗಲಿಲ್ಲ. ಇಂದು ರಾತ್ರಿ ಊರಲ್ಲಿ ಬಂದದ್ದು ಗೊತ್ತಾಗಿ ಅದನ್ನು ಹಿಡಿದು ಕಟ್ಟಿದ್ದೇವೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಗಡಿ ಕುಶನೂರದಲ್ಲಿ ಮೊಸಳೆ ಪತ್ತೆಯಾಗಿರುವ ಕುರಿತು ಮಾಹಿತಿ ಬಂದಿದೆ. ಊರಿನ ಪಕ್ಕದಲ್ಲಿರುವ ಕರೆಯಿಂದ ಈ ಮೊಸಳೆ ಹೊರ ಬಂದಿರುವ ಸಾಧ್ಯತೆ ಇದೆ. ಅದು ಐದಾರು ತಿಂಗಳ ಮರಿ ಇದೆ. ಆದರೂ ಅದರ ಬಳಿ ಜನ ಹೋಗುವುದು ಅಪಾಯಕಾರಿ.  ಮೊಸಳೆಯನ್ನು ಮೇಲಾಧಿಕಾರಿಗಳ ಸೂಚನೆಯಂತೆ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಉಪ ಅರಣ್ಯ ವಲಯ ಅಧಿಕಾರಿ ಅಂಕುಶ ಮಚಕುರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT