7

ದರೋಡೆ ಪ್ರಕರಣ: 4 ಆರೋಪಿಗಳ ಬಂಧನ

Published:
Updated:
ದರೋಡೆ ಕೃತ್ಯಗೈದ ಆರೋಪಿಗಳನ್ನು 4ದ್ವಿಚಕ್ರ ವಾಹನ ಸಮೇತ ಶುಕ್ರವಾರ ಹುಮನಾಬಾದ್ ಪೊಲೀಸ್ ಹಾಜರು ಪಡಿಸಿದರು.

ಹುಮನಾಬಾದ್: ತಾಲ್ಲೂಕಿನ ವಿವಿಧ ದರೋಡೆ ಕೃತ್ಯಗಳಲ್ಲಿ ಭಾಗಿಯಾದ ನಾಲ್ವರು ಆರೋಪಿಗಳನ್ನು ನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ತೌಫಿಕ್‌ ಅಬ್ದುಲ್‌ ಖಲೀಲ್, ಇಮ್ರಾನ್‌ ಖಾಜಾಖಾನ್, ಮಸ್ತಾನ್‌ ಅಬ್ದುಲ್‌ ಗನಿ ಮತ್ತು ಶೇಖ ಸಿದ್ದಿಖಿ ಶೇಖ ಸಮೀಮ್‌ ಬಂಧಿತ ಆರೋಪಿಗಳು. ಅವರಿಂದ 4 ದ್ವಿಚಕ್ರ ವಾಹನ, 1 ಚಾಕು ಮತ್ತು ₹ 25 ಸಾವಿರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ಮಾರ್ಗದರ್ಶನದ ಮೇರೆಗೆ ಹುಮನಾಬಾದ್ ಉಪವಿಭಾಗ ವ್ಯಾಪ್ತಿಯ ಪೊಲೀಸರು ಕಾರ್ಯಾಚರಣೆ ನಡೆಸಿದರು.

ಮೂರು ತಿಂಗಳ ಹಿಂದೆ ಕೈಗಾರಿಕಾ ಪ್ರದೇಶದ ಹಿಂಬದಿ ಮುನೇಶ್ವರ ಬಾಗ್ ಸಮೀಪದ ನಿವಾಸಿ ಮಡೆಪ್ಪ ಕುಂಬಾರ ಅವರು ಆರ್‌ಟಿಒ ಚೆಕ್ ಪೋಸ್ಟ್‌ ಬಳಿ ನಡೆದುಕೊಂಡು ಬರುತ್ತಿದ್ದಾಗ, ಬೈಕ್‌ನಲ್ಲಿ ಬಂದ ದರೋಡೆಕೋರರು ಚಾಕುವಿನಿಂದ ಇರಿದು ಗಾಯಗೊಳಿಸಿ, ಮೊಬೈಲ್‌ ಕಿತ್ತುಕೊಂಡು ಫರಾರಿ ಆಗಿದ್ದರು. ಘಟನೆ ಕುರಿತು ಮಡೆಪ್ಪ ಕುಂಬಾರ ಅವರು ನೀಡಿದ ದೂರು ಆಧರಿಸಿ, ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ದೇವರಾಜ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಹರಿಬಾಬು, ಡಿವೈಎಸ್ಪಿ ಚಂದ್ರಕಾಂತ ಪುಜಾರಿ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಜೆ.ಎಸ್.ನ್ಯಾಮಗೌಡರ್‌ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !