ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ರಾಮ ಮಂದಿರ ಮಂತ್ರಾಕ್ಷತೆ ವಿತರಿಸಿದ ಕೇಂದ್ರ ಸಚಿವ ಭಗವಂತ ಖೂಬಾ

Published 15 ಜನವರಿ 2024, 6:53 IST
Last Updated 15 ಜನವರಿ 2024, 6:53 IST
ಅಕ್ಷರ ಗಾತ್ರ

ಬೀದರ್‌: ಕೇಂದ್ರ ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ನಗರದಲ್ಲಿ ಭಾನುವಾರ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ಮನೆ, ಮನೆಗಳಿಗೆ ತೆರಳಿ ವಿತರಿಸಿದರು.

ಅಯೋಧ್ಯೆಯಲ್ಲಿ ಜ.22ರಂದು ರಾಮ ಮಂದಿರದ ಉದ್ಘಾಟನೆ ನಡೆಯಲಿದ್ದು, ಅದರ ಅಂಗವಾಗಿ ಕೇಂದ್ರ ಸಚಿವರು ಇಲ್ಲಿನ ಶಿವನಗರದಲ್ಲಿ ಮಂತ್ರಾಕ್ಷತೆ ವಿತರಿಸಿದರು.

‘ಜ.22ರಂದು ಮಂದಿರದ ಉದ್ಘಾಟನೆ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮನೆಗಳಲ್ಲಿ ದೀಪಗಳನ್ನು ಬೆಳಗಿಸಿ ದೀಪಾವಳಿ ಹಬ್ಬದಂತೆ ಆಚರಿಸಬೇಕು. ಇತರರಿಗೂ ಈ ಕೆಲಸ ಮಾಡುವಂತೆ ಪ್ರೇರೇಪಿಸಬೇಕು. ಎಲ್ಲರೂ ರಾಮನ ಆದರ್ಶಗಳನ್ನು ಅಳವಡಿಸಿಕೊಳ್ಳೋಣ. ಕೇಡು ಬಯಸುವವರಿಗೂ ಒಳ್ಳೆಯದನ್ನೇ ಬಯಸೋಣ’ ಎಂದು ಖೂಬಾ ಹೇಳಿದರು.

ಸಚಿವರ ಪತ್ನಿ ಶೀಲಾ ಖೂಬಾ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಲಬುರಗಿ ವಿಭಾಗದ ಸಂಚಾಲಕ ಹಣಮಂತರಾವ ಪಾಟೀಲ, ಜಿಲ್ಲಾ ಸಂಘ ಚಾಲಕ ಶಿವರಾಜ ಹಲಶೆಟ್ಟಿ, ಬೀದರ್‌ ನಗರ ಕಾರ್ಯವಾಹ ಶಿವಕುಮಾರ ಕುಂಬಾರ, ಪ್ರಮುಖರಾದ ದತ್ತು ತುಪ್ಪದ, ಮಾರುತಿ ಶೇರಿಕಾರ, ದಿನೇಶ ಮೂಲಗೆ, ಮಹೇಶ ಪಾಟೀಲ, ಶಂಕರರಾವ ಬಿರಾದಾರ ಇತರರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT