ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2500 ಭಕ್ತರಿಗೆ ದೇವಿ ದರ್ಶನಕ್ಕೆ ವ್ಯವಸ್ಥೆ

ಪ್ರದೀಪ ವಾತಡೆಯಿಂದ ಉಚಿತ ವಾಹನ, ಅನ್ನದಾಸೋಹ
Last Updated 2 ಅಕ್ಟೋಬರ್ 2022, 5:23 IST
ಅಕ್ಷರ ಗಾತ್ರ

ಬಸವಕಲ್ಯಾಣ: ಮುಖಂಡ ಪ್ರದೀಪ ವಾತಡೆ ಅವರು ದಸರಾ ಹಬ್ಬದ ಅಂಗವಾಗಿ ಶನಿವಾರ 2500 ಭಕ್ತರಿಗೆ ಮಹಾರಾಷ್ಟ್ರದಲ್ಲಿನ ತುಳಜಾಪುರ ದ ಭವಾನಿ ದೇವಿ ದರ್ಶನಕ್ಕಾಗಿ ಉಚಿತ ವಾಹನ ಹಾಗೂ ಅನ್ನ ದಾಸೋಹ ವ್ಯವಸ್ಥೆ ಮಾಡಿದ್ದಾರೆ.

ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಯಾತ್ರೆಗೆ ಚಾಲನೆ ನೀಡಿ ಮಾತನಾಡಿ,‘ಧರ್ಮ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು. ಪ್ರದೀಪ ವಾತಡೆಯವರು ಭಕ್ತರಿಗಾಗಿ ದೇವಿ ದರ್ಶನಕ್ಕೆ ವ್ಯವಸ್ಥೆ ಮಾಡಿರುವುದು ಉತ್ತಮ ಕಾರ್ಯವಾಗಿದೆ’ ಎಂದು ಅವರು ಹೇಳಿದರು.

ಪ್ರದೀಪ ವಾತಡೆ ಮಾತನಾಡಿ,‘ಅನೇಕರಿಗೆ ತುಳಜಾ ಪುರದ ದೇವಿ ದರ್ಶನ ಪಡೆಯುವ ಬಯಕೆ ಇದ್ದರೂ ಬಡತನದ ಕಾರಣ ಈಡೇರುವುದಿಲ್ಲ. ಆದ್ದರಿಂದ ತಾಲ್ಲೂಕಿನ ಎಲ್ಲ ಹಳ್ಳಿಗಳಲ್ಲಿನ ಆಸಕ್ತರಿಗೆ ವಾಹನ ಮತ್ತು ಎರಡು ಸಲದ ಅನ್ನದಾಸೋಹದ ವ್ಯವಸ್ಥೆಗೈದಿರುವೆ. ಈ ಕಾರ್ಯದಿಂದ ದೇವಿಯ ಆಶೀರ್ವಾದದ ಜತೆಗೆ ಜನರ ಕೃಪೆಯೂ ದೊರೆಯುತ್ತದೆ. ಸಂಸ್ಕೃತಿಯ ಪಾಲನೆಯೂ ಆಗುತ್ತದೆ ಎಂಬ ಭಾವನೆ ನನ್ನದು’ ಎಂದು ಅವರು ಹೇಳಿದರು.

ಮುಖಂಡರಾದ ಕೃಷ್ಣಾ ಗೋಣೆ, ರವಿ ನಾವದ್ಗೇಕರ್, ನಾಗೇಶ ಮೇತ್ರೆ, ಜಯಶ್ರೀ ಸುಭಾಷ ವಾತಡೆ ಮಾತನಾಡಿದರು.

ಬಸವೇಶ್ವರ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ವೀರಣ್ಣ ಹಲಶೆಟ್ಟೆ, ಜಗನ್ನಾಥ ಖೂಬಾ, ಸಂತೋಷ ಗುದಗೆ, ಅಮರ ಬಡದಾಳೆ, ಡಾ.ವೈಜನಾಥ ಭಂಡಾರಿ, ಪ್ರಭು ಕಾಡಾದಿ, ಶಿವಶಂಕರ ಅಮರಶೆಟ್ಟಿ, ಪ್ರಕಾಶ ತೂಗಾವೆ, ಆನಂದ ಜೀವಣೆ, ಸಂಗಮೇಶ ಪಾಟೀಲ, ವಿಠಲ್ ಹೂಗಾರ, ಮಲ್ಲಿಕಾರ್ಜುನ ಮೆಟಗೆ, ಶ್ರೀಶೈಲ ವಾತಡೆ ಹಾಗೂ ಜಗನ್ನಾಥ ಕಾಳಗೆ, ರಾಮಶೆಟ್ಟಿ ಬಿರಾದಾರ ಹಾಗೂ ಸುರೇಶ ಜಮ್ಮು ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT