ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್ | ವಿಶ್ವ ಶುಶ್ರೂಷಕರ ದಿನಾಚರಣೆ

Published 13 ಮೇ 2024, 16:23 IST
Last Updated 13 ಮೇ 2024, 16:23 IST
ಅಕ್ಷರ ಗಾತ್ರ

ಬೀದರ್: ಇಲ್ಲಿನ ಬ್ರಿಮ್ಸ್ ಆವರಣದಲ್ಲಿರುವ ಬ್ರಿಮ್ಸ್ ನರ್ಸಿಂಗ್ ಕಾಲೇಜಿನಲ್ಲಿ ಸೋಮವಾರ ವಿಶ್ವ ಶುಶ್ರೂಷಕರ ದಿನ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್ ಮಾತನಾಡಿ,‘ಶುಶ್ರೂಷಾ ಅಧಿಕಾರಿಗಳ ಸೇವೆ ಬಹಳ ಶ್ರೇಷ್ಠವಾದುದು. ಕೋವಿಡ್ ವೇಳೆ ಅಧಿಕಾರಿಗಳು ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದರು. ಜನರ ಪ್ರಾಣ ರಕ್ಷಿಸಿದ್ದರು’ ಎಂದು ಅವರ ಸೇವೆ ಶ್ಲಾಘಿಸಿದರು.

ರಾಜ್ಯದ ಎಲ್ಲ ಸರ್ಕಾರಿ ನರ್ಸಿಂಗ್ ಕಾಲೇಜುಗಳಲ್ಲಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಮೂರ್ತಿ ಸ್ಥಾಪನೆಯಾಗಬೇಕು. ರಾಜ್ಯದಲ್ಲೇ ಸದ್ಯ ಬೀದರ್‌ನ ನರ್ಸಿಂಗ್ ಕಾಲೇಜಿನಲ್ಲಿ ಮಾತ್ರ ಫ್ಲಾರೆನ್ಸ್ ನೈಟಿಂಗೇಲ್ ಅವರ ಮೂರ್ತಿ ಇದೆ. ಫ್ಲಾರೆನ್ಸ್ ನೈಟಿಂಗೇಲ್ ಮಾನವೀಯ ಸೇವೆ ಇತರರಿಗೆ ಪ್ರೇರಣೆ ಆಗುವ ದಿಸೆಯಲ್ಲಿ ಎಲ್ಲ ಕಾಲೇಜುಗಳ ಆವರಣದಲ್ಲಿ ಅವರ ಮೂರ್ತಿ ಸ್ಥಾಪಿಸುವ ಅವಶ್ಯಕತೆ ಇದೆ ಎಂದು ಶುಶ್ರೂಷಾ ಅಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷ ರಾಜಕುಮಾರ ಮಾಳಗೆ ಅಭಿಪ್ರಾಯಪಟ್ಟರು.

ಫ್ಲಾರೆನ್ಸ್ ನೈಟಿಂಗೇಲ್ ತಮ್ಮ ಸೇವೆಯ ಮೂಲಕ ವಿಶ್ವದಲ್ಲಿ ಹೆಸರು ಮಾಡಿದ್ದರು. ಶುಶ್ರೂಷಾ ಅಧಿಕಾರಿಗಳು ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಹೇಶ ಬಿರಾದಾರ ತಿಳಿಸಿದರು.

ಬ್ರಿಮ್ಸ್ ಆಸ್ಪತ್ರೆ ನರ್ಸಿಂಗ್ ಸೂಪರಿಟೆಂಡೆಂಟ್‌ ಶಿವಯೋಗಿ ಬಾಲಿ, ರಾಜ್ಯ ಶುಶ್ರೂಷಾ ಅಧಿಕಾರಿಗಳ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಣಿಕಾ ಚಂದನ್, ಅಲೀಮ್, ಪ್ರಕಾಶ ಮಹಿಮಾಕರ್ ಹಾಗೂ ಸುಧಾಕರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT