ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಶ್ರೌರ್ಯ ದಿವಸ್, ರಕ್ತದಾನ ಶಿಬಿರ

ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸ ದಿನ; ಆಜಾದ್‌ ಹಿಂದೂ ಸೇನೆ ಆಯೋಜನೆ
Last Updated 6 ಡಿಸೆಂಬರ್ 2022, 15:52 IST
ಅಕ್ಷರ ಗಾತ್ರ

ಚಾಮರಾಜನಗರ: ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸಗೊಳಿಸಿದ ದಿನದ (ಡಿ.6) ಅಂಗವಾಗಿ ಆಜಾದ್‌ ಹಿಂದೂ ಸೇನೆಯು ಮಂಗಳವಾರ ‘ಶೌರ್ಯ ದಿವಸ್‌’ ಆಚರಣೆ ಮಾಡಿದ್ದು, ರಕ್ತದಾನ ಶಿಬಿರ ಹಮ್ಮಿಕೊಂಡಿತ್ತು.

ಯಡಬೆಟ್ಟದ ವೈದ್ಯಕೀಯ ಕಾಲೇಜು ಬೋಧನಾ ಆಸ್ಪತ್ರೆಯಲ್ಲಿ ನಡೆದ ಶಿಬಿರದಲ್ಲಿ 20 ಮಂದಿ ರಕ್ತದಾನ ಮಾಡಿದರು.

ಅಜಾದ್‌ ಹಿಂದೂ ಸೇನೆ ಅಧ್ಯಕ್ಷ ಎಂ.ಎಸ್.ಫೃಥ್ವಿರಾಜ್ ಮಾತನಾಡಿ, ‘600 ವರ್ಷಗಳ ಹಿಂದೆ ಶ್ರೀರಾಮನ ಜನ್ಮ ಸ್ಥಳವಾದ ಅಯೋಧ್ಯೆಯಲ್ಲಿ ಇದ್ದ ಭವ್ಯ ರಾಮಮಂದಿರವನ್ನು ಕೆಡವಿ ಬಾಬರಿ ಮಸೀದಿ ನಿರ್ಮಿಸಿ ಪ್ರಭು ಶ್ರೀರಾಮಚಂದ್ರನಿಗೆ ಅಪಮಾನ ಮಾಡಲಾಗಿತ್ತು. 1992 ಡಿ.6ರಂದು ಮಸೀದಿಯನ್ನು ಕೆಡವಿ ಕಳಂಕವನ್ನು ಮುಕ್ತಿಗೊಳಿಸಲಾಗಿತ್ತು’ ಎಂದರು.

‘ಹಿಂದೂಗಳ ಸಪ್ತಮೋಕ್ಷದಾಯಕ ನಗರಗಳಲ್ಲಿ ಅಯೋಧ್ಯೆ ಪ್ರಥಮ ಸ್ಥಾನದಲ್ಲಿದ್ದು, ಹಿಂದೂ ಶ್ರದ್ಧಾ ಕೇಂದ್ರವಾಗಿದೆ. ಭವ್ಯ ಶ್ರೀರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಪಣತೊಟ್ಟಿದೆ. ಕಾಶಿ ವಿಶ್ವನಾಥ ಮಂದಿರದಲ್ಲಿ ಜ್ಞಾನವಾಪಿ ಮಸೀದಿ ನಿರ್ಮಾಣವಾಗಿದ್ದು, ಇದನ್ನು ತೆರವುಗೊಳಿಸಿ ಭವ್ಯ ಈಶ್ವರ ಮಂದಿರ ನಿರ್ಮಾಣಕ್ಕೆ ಎಲ್ಲರೂ ಪಣತೊಡಬೇಕು’ ಎಂದರು

ಮುಖಂಡ ಸುರೇಶ್ ನಾಯಕ, ಸೇನೆಯತಾಲ್ಲೂಕು ಅಧ್ಯಕ್ಷ ಮಹದೇವಸ್ವಾಮಿ, ಮಾಧು ಮಂಗಲ, ಹರದನಹಳ್ಳಿ ಕುಮಾರ್, ಕೃಷ್ಣ, ಸುರೇಶ್ ಟೌನ್ ಅಧ್ಯಕ್ಷ ಪ್ರಭು, ಯುವ ಮುಖಂಡ ಆನಂದ, ಅಭಿ, ರಾಮಸಮುದ್ರ ಚೇತು, ಅಭಿ, ಚಂದು, ಗುಂಡ್ಲುಪೇಟೆ ಸಂಜಯ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT