ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಮಹೇಶ್‌ ಉಚ್ಚಾಟನೆಗೆ ಬಿಎಸ್‌ಪಿ ಆಗ್ರಹ

Published 25 ಏಪ್ರಿಲ್ 2024, 4:40 IST
Last Updated 25 ಏಪ್ರಿಲ್ 2024, 4:40 IST
ಅಕ್ಷರ ಗಾತ್ರ

ಚಾಮರಾಜನಗರ: ‘ರಾಮನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಕೊಳ್ಳೇಗಾಲದ ದಲಿತ ಜನಾಂಗದ ಬಗ್ಗೆ ಅವಹೇಳನ ಕಾರಿಯಾಗಿ ಮಾತನಾಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್‌.ಮಹೇಶ್‌ ಅವರನ್ನು ಪಕ್ಷವೂ ತಕ್ಷಣವೇ ಉಚ್ಚಾಟಿಸಬೇಕು’ ಎಂದು ಬಿಎಸ್‌ಪಿ  ಅಭ್ಯರ್ಥಿ ಎಂ.ಕೃಷ್ಣಮೂರ್ತಿ ಬುಧವಾರ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂತಹ ಹೇಳಿಕೆಗಳ ಮೂಲಕ ಎನ್.ಮಹೇಶ್ ಅವರು ದಲಿತ ಜನಾಂಗಕ್ಕೆ ಅಪಮಾನ ಮಾಡಿದ್ದಾರೆ. ಹೊಲೆಯ ಎಂಬುದು ಅಗೌರವ ಸೂಚಕ ಅಲ್ಲ. ಅದೊಂದು ಹೆಮ್ಮೆಯ ಸಂಕೇತ. ಈ ಜನಾಂಗದಲ್ಲಿ ಹುಟ್ಟಲು ಹೆಮ್ಮೆಪಡಬೇಕು. ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್‌ಗೆ ಜನ್ಮ ಕೊಟ್ಟ ಜನಾಂಗವಾಗಿದೆ’ ಎಂದರು. 

‘ಬಿಜೆಪಿಗೆ ದಲಿತ ಜನಾಂಗದ ಬಗ್ಗೆ ಗೌರವವಿದ್ದರೆ ಎನ್.ಮಹೇಶ್ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬಾರದು’ ಎಂದರು. 

ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹ.ರಾ.ಮಹೇಶ್, ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಪದಾಧಿಕಾರಿಗಳಾದ ರಾಜೇಂದ್ರ, ಪ್ರಕಾಶ್, ರಾಜಶೇಖರ್, ಎಸ್.ಪಿ.ಮಹೇಶ್ ಇದ್ದರು.

ಕೃಷ್ಣಮೂರ್ತಿ ಬೆಂಬಲಿಸಿ: ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿದ ಭೀಮ ಪುತ್ರಿ ಬ್ರಿಗೇೆಡ್‌ನ ರಾಜ್ಯಾಧ್ಯಕ್ಷೆ ರೇವತಿರಾಜ್‌ ನಾಯಕ, ‘ಸಂವಿಧಾನ ಆಶಯದಲ್ಲಿ ಕೆಲಸ ಮಾಡುವ ಬಿಎಸ್‌ಪಿಗೆ ಕ್ಷೇತ್ರದ ಮತದಾರರು ಬೆಂಬಲ ನೀಡಬೇಕು. ಕೃಷ್ಣಮೂರ್ತಿ ಅವರು ಒಳ್ಳೆಯ ವ್ಯಕ್ತಿಯಾಗಿದ್ದು, ಚಾಮರಾಜನಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸು ಕಂಡಿದ್ದಾರೆ’ ಎಂದರು. 

‘ನಾನು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೆ. ಎಲ್ಲ ಕಡೆಯೂ ಬಿಎಸ್‌ಪಿ ಅಭ್ಯರ್ಥಿಗಳನ್ನು ತುಳಿಯುವ ಕೆಲಸ ಆಗುತ್ತಿತ್ತು. ನಾಮಪತ್ರದಲ್ಲಿ ಬರೆಯುವಾಗ ಆಗಿದ್ದ ಸಣ್ಣ ತಪ್ಪಿನ ಕಾರಣಕ್ಕೆ ನನ್ನ ನಾಮಪತ್ರ ತಿರಸ್ಕರಿಸಲಾಗಿದೆ. ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರವೂ ಅದೇ ರೀತಿ ಇದೆ. ಇದರ ವಿರುದ್ಧ ಹೋರಾಟ ಮಾಡುತ್ತೇನೆ’ ಎಂದರು. 

ಮುಖಂಡ ದಿವಿಲ್‌ ಕುಮಾರ್‌, ಸೂರ್ಯರಾಜ್‌ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT