ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು: ಚಾಮುಂಡೇಶ್ವರಿ ರಥೋತ್ಸವಕ್ಕೆ ಸಂಪನ್ನ

Published 23 ಮೇ 2024, 14:25 IST
Last Updated 23 ಮೇ 2024, 14:25 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಅಂಬಳೆ ಗ್ರಾಮದ ಚಾಮುಂಡೇಶ್ವರಿ ರಥೋತ್ಸವ ಗುರುವಾರ ವೈಭವದಿಂದ ನಡೆಯಿತು.

ಮುಂಜಾನೆ ವೈಶಾಖ ಶುದ್ಧ ಪೂರ್ಣಿಮ ವಿಶಾಖ ನಕ್ಷತ್ರದಲ್ಲಿ ತೇರಿಗೆ ಚಾಲನೆ ನೀಡಲಾಯಿತು. ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದೇವಿಯ ಬೆಳ್ಳಿ ಕೋಲನ್ನು ಹೊತ್ತು, ಸಂತಸ ಸಡಗರದ ನಡುವೆ ರಥ ಎಳೆದು ಸಂಭ್ರಮಿಸಿದರು.

ಮುಂಜಾನೆ ಹೋಮ, ಹವನ ಪೂಜಾ ಕೈಂಕರ್ಯಗಳು ನಡೆದವು. ದೇವರ ಮೂರ್ತಿಗೆ ಬಗೆಬಗೆ ಹೂ ಹಾರಗಳಿಂದ ಸಿಂಗರಿಸಿ, ಎಣ್ಣೆ ಮಜ್ಜನ ಮಾಡಿಸಿ, ಪಂಚಾಮೃತ ಪೂಜೆ ನಂತರ ಮಹಾ ಮಂಗಳಾರತಿ ನೆರವೇರಿಸಿ, ಭಕ್ತರಿಗೆ ದೇವಾಲಯವನ್ನು ಮುಕ್ತಗೊಳಿಸಲಾಯಿತು.

ದೇಗುಲದ ಮುಂಭಾಗ ಹಣ್ಣುಕಾಯಿ ಮಾಡಿಸಿ, ಗಂಧ ಮತ್ತು ಕರ್ಪೂರ ಬೆಳಗಿದರು. ನಂತರ ಸರತಿ ಸಾಲಿನಲ್ಲಿ ನಿಂತು ಸಪ್ತ ಮಾತೃಕೆಯರ ದರ್ಶನ ಪಡೆದರು. ತೀರ್ಥ ಪ್ರಸಾದ ಸೇವಿಸಿದರು. ಸಾವಿರಾರು ಭಕ್ತರು ಗುಡಿ ಸುತ್ತಲೂ ಕುಳಿತು ಅನ್ನಪ್ರಸಾದ ಸೇವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT