ಗುಂಡ್ಲುಪೇಟೆ: ರಾಜ್ಯ ಕಾಂಗ್ರೆಸ್ ರಾಜ್ಯಪಾಲ ಥಾವರಚಂದ್ ಗೆಹ್ಲೋತ್ ಅವರನ್ನು ಗುರಿ ಮಾಡಿ ಮುಗಿಬೀಳುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದೆ ಎಂದು ಎಸ್ಸಿ ಮೋರ್ಚಾ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ನವೀನ್ ಮೌರ್ಯ ಕಿಡಿಕಾರಿದರು.

ರಾಜ್ಯಪಾಲರ ಅಧಿಕಾರವನ್ನು ದುರ್ಬಲಗೊಳಿಸುವ ಹುನ್ನಾರದಿಂದ ಬಿ.ಕೆ.ಹರಿಪ್ರಸಾದ್ ಅವರು ಥಾವರಚಂದ್ ಗೆಹ್ಲೋತ್ ಮೇಲೆ ದಾಳಿ ನಡೆಸಿ ಅವರ ಹುದ್ದೆಗೆ ಅಗೌರವ ತೋರಿದ್ದಾರೆ. ಜೊತೆಗೆ ರಾಜ್ಯಪಾಲರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಕಾಂಗ್ರೆಸ್ನವರು ನಿರಂತರ ಅಪಹಾಸ್ಯ ಮಾಡಿ ಮಾತನಾಡುತ್ತಿದ್ದಾರೆ. ಯುಪಿಎ ಸರ್ಕಾರ ಇದ್ದ ಅವಧಿಯಲ್ಲಿ ರಾಜ್ಯಪಾಲರ ನಡೆ ಸರಿ ಎಂದೇಳಿ, ಈಗ ಎನ್ಡಿಎ ಸರ್ಕಾರದಲ್ಲಿ ರಾಜ್ಯಪಾಲರ ಆಡಳಿತ ಸರಿಯಿಲ್ಲ ಎನ್ನುತ್ತಿರುವ ನಡೆ ಖಂಡನೀಯ ಎಂದು ತಿಳಿಸಿದರು.

ನರೇಗಾ ಯೋಜನೆಯನ್ನು ಜೀ ರಾಮ್ ಜೀ ಎಂದು ಹೆಸರು ಬದಲಿಸಿರುವುದಕ್ಕೆ ಆಕ್ರೋಶ ಭರಿತವಾಗಿರುವ ಕಾಂಗ್ರೆಸ್ ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿದ್ದ ವೇಳೆ ಏರ್ ಪೋರ್ಟ್, ಸರ್ಕಾರಿ ಕಟ್ಟಡ ಸೇರಿ ಇನ್ನಿತರ ಪ್ರಮುಖ ಸ್ಥಳಗಳಿಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಜವಾಹರಲಾಲ್ ನೆಹರೂ ಎಂದು ಕುಟುಂಬದವರ ಹೆಸರಿಟ್ಟು ಸ್ವಾರ್ಥ ಮೆರೆದಿದ್ದರು. ಆ ಸಂದರ್ಭ ಕಾಂಗ್ರೆಸ್ನವರಿಗೆ ಅಂಬೇಡ್ಕರ್ ನೆನಪಾಗಲಿಲ್ಲ ಎಂದು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.