ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಸೋಂಕಿತರ ಸಂಖ್ಯೆ ಇಳಿಮುಖ

Last Updated 7 ಮೇ 2021, 16:47 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ ಕೊರೊನಾ ಸೋಂಕಿತರು ಮತ್ತು ಮರಣ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದೆ. 9 ಮಂದಿ ಮೃತಪಟ್ಟಿದ್ದರೆ, 611 ಮಂದಿ ಹೊಸದಾಗಿ ಸೋಂಕಿತರಾಗಿದ್ದಾರೆ. 386 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಒಟ್ಟು 2,989 ಮಂದಿ ಹೋಂ ಐಸೋಲೇಷನ್‌ಲ್ಲಿಯೇ ಇದ್ದಾರೆ. 50 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತಪಟ್ಟವರಲ್ಲಿ ಯಳಂದೂರು ತಾಲ್ಲೂಕಿನ ದುಗ್ಗಹಟ್ಟಿ ಗ್ರಾಮದ 62 ವರ್ಷದ ಮಹಿಳೆ, ಚಾಮರಾಜನಗರದ 38 ವರ್ಷದ ಪುರುಷ, ತಾಲ್ಲೂಕಿನ ಮಲ್ಲಳ್ಳಿಮಾಳ ಗ್ರಾಮದ 60 ವರ್ಷದ ಮಹಿಳೆ, ಚಂದಕವಾಡಿ ಗ್ರಾಮದ 47 ವರ್ಷದ ಪುರುಷ, ಬಸವಟ್ಟಿ ಗ್ರಾಮದ 68 ವರ್ಷದ ಪುರುಷ, ವರದರಾಜಪುರ ಗ್ರಾಮದ 52 ವರ್ಷದ ಪುರುಷ, ಗುಂಡ್ಲುಪೇಟೆ ತಾಲ್ಲೂಕಿನ ರಾಘವಪುರ ಗ್ರಾಮದ 48 ವರ್ಷದ ಪುರುಷ, ತಾಲ್ಲೂಕಿನ ಅಣ್ಣೂರು ಕೇರಿಯ 44 ವರ್ಷದ ಪುರುಷ, ಕೊಳ್ಳೇಗಾಲ ಪಟ್ಟಣದ 53 ವರ್ಷದ ಮಹಿಳೆ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT