ಚಾಮರಾಜನಗರ: ವಿವಿಧ ರೀತಿಯ ಬಣ್ಣಗಳನ್ನು ಉಪಯೋಗಿಸಿ ಕಲಾತ್ಮಕ ಚಿತ್ರಗಳನ್ನು ರಚಿಸುವುದರಲ್ಲಿ ನಗರದ ನಿವಾಸಿ ತಾಲ್ಲೂಕಿನ ದೊಡ್ಡರಾಯಪೇಟೆಯ ಮಹದೇವಸ್ವಾಮಿ ಸಿದ್ಧಹಸ್ತರು.

ಚಿತ್ರಕಲೆಯ ಬಗ್ಗೆ ಆಳವಾಗಿ ಅರಿತುಕೊಂಡಿರುವ56 ವರ್ಷದ ಮಹದೇವಸ್ವಾಮಿ ಅವರು, ಸಂಪೂರ್ಣವಾಗಿಈ ಕಲೆಯಲ್ಲಿತೊಡಗಿಕೊಂಡಿದ್ದಾರೆ. ಕಾಗದ ಅಥವಾ ಕ್ಯಾನ್ವಾಸಿನ ಮೇಲೆ ಮಾನವ ಜೀವಿ ಮೂರ್ತ ಅಥವಾ ಅಮೂರ್ತ ದೃಶ್ಯವನ್ನು ಅರ್ಥವತ್ತಾಗಿ ಮೂಡಿಸುವುದು ಹಾಗೂ ದೇವಸ್ಥಾನ ಗೋಪುರಗಳನ್ನು ವರ್ಣಗಳಲ್ಲಿ ಮರು ನಿರ್ಮಾಣ ಮಾಡುವುದುಇವರ ಕಾಯಕ.

1981–82ರಲ್ಲಿ ಮೈಸೂರಿನ ಕಲಾನಿಕೇತನದಲ್ಲಿ 2 ವರ್ಷದ ಕೋರ್ಸ್ ಮಾಡಿ ಆನಂತರ ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜು (ಕಾವಾ) ಸೇರಿಕೊಂಡು ಚಿತ್ರಕಲೆಯಲ್ಲಿ ಪರಿಣತಿ ಹೊಂದಿದರು.ಚಿತ್ರಕಲೆ, ನೀರು ಬಿದ್ದರೂ ಹಾಳಾಗದ ಕಲಾಕೃತಿಗಳನ್ನು ಬಿಡಿಸುವುದು ಮತ್ತು ಪುರಾತನವಾದ ಕಟ್ಟಡಗಳ ದುರಸ್ತಿ ಮಾಡುವುದರಲ್ಲಿ ಪಳಗಿದರು.

ಮೈಸೂರಿನ ಮೃಗಾಲಯ ಸಮೀಪವಿರುವ ಕರಕುಶಲ ವಸ್ತುಗಳತಯಾರಕರಾದರಾಮ್ಸನ್ಸ್ ಅವರು ಪ್ರತಿ ವರ್ಷ ಕ್ಯಾಲೆಂಡರ್ಗೆ ಮಹದೇವಸ್ವಾಮಿ ಅವರಿಂದಲೇ ಚಿತ್ರಗಳನ್ನು ಬರೆಸುತ್ತಾರೆ. 2008–09ರಲ್ಲಿ ಮೈಸೂರು ಅರಮನೆ ಅಂಗಳದ ದರ್ಬಾರ್ ಪ್ರವೇಶದಲ್ಲಿ 4ನೇ ಕೃಷ್ಣರಾಜ ಒಡೆಯರ್ ಅವರ ಮೂರ್ತಿಯನ್ನು ನಿರ್ಮಿಸಿ ಮಹಾರಾಜರೇ ಕುಳಿತಿರುವಂತೆ ಕಾಣಿಸಿರುವುದು ಇವರ ಹೆಗ್ಗಳಿಕೆ.

ಗುತ್ತಿಗೆ ಆಧಾರದಡಿ ಕೆಲಸ: ‘ದೇವಸ್ಥಾನ ಗೋಪುರ, ಗೋಡೆ ಬರಹ ಸೇರಿದಂತೆ ಇಂತಹ ಅನೇಕ ಚಿತ್ರ ಬರಹಗಳನ್ನು ಗುತ್ತಿಗೆ ಪಡೆದು ನಿಗದಿತ ಅವಧಿಯಲ್ಲಿ ಮುಗಿಸಿಕೊಡುತ್ತೇನೆ. ಗೋಪುರ ಕೆಲಸ ತಿಂಗಳಾಗುತ್ತದೆ. ಉಳಿದಂತೆ ಕಲಾಕೃತಿಗಳನ್ನು ಬಿಡಿಸುವುದನ್ನು 15ರಿಂದ 20 ದಿನಗಳಲ್ಲಿ ಮುಗಿಸುತ್ತೇನೆ. ಕೆಲಸದ ಆಧಾರದಡಿ ಸಂಭಾವನೆ ನೀಡುತ್ತಾರೆ. ಎಲ್ಲ ಕೆಲಸವನ್ನು ನಾನೊಬ್ಬನೇ ನಿಭಾಯಿಸುತ್ತೇನೆ. ಹೆಚ್ಚುವರಿ ಕೆಲಸ ಇದ್ದರೆ ಮಾತ್ರ ವಿದ್ಯಾರ್ಥಿಗಳನ್ನು ಸಹಾಯಕ್ಕೆ ಕರೆಸಿಕೊಳ್ಳುತ್ತೇನೆ. ಅವರಿಗೂ ಸಂಭಾವನೆ ನೀಡುತ್ತೇನೆ’ ಎಂದು ಮಹದೇವಸ್ವಾಮಿ ‘ಪ್ರಜಾವಾಣಿ’ಗೆ ಹೇಳಿದರು.

ಖುಷಿ ನೀಡಿದೆ: ‘ದೇವಸ್ಥಾನ ಗೋಪುರ, ಅರಮನೆಯಲ್ಲಿ ಮಹಾರಾಜರ ಮೂರ್ತಿ, ಕ್ಯಾನ್ವಾಸ್ ಬರಹ ಸೇರಿದಂತೆ ವಿವಿಧ ಬಗೆಯ ಚಿತ್ರಕಲೆಯಲ್ಲಿ ಪರಿಣತಿ ಹೊಂದಿ ಮೈಸೂರು, ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿದ್ದೇನೆ. ಇದರಲ್ಲಿ ಆದಾಯ ಕಡಿಮೆಯಾದರೂ ನನಗೆ ಖುಷಿ ನೀಡಿದೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.