ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ಬೋಸ್‌ಗೆ ಡಿಎಸ್‌ಎಸ್ ಬೆಂಬಲ: ಮೂರ್ತಿ

Published 3 ಏಪ್ರಿಲ್ 2024, 3:15 IST
Last Updated 3 ಏಪ್ರಿಲ್ 2024, 3:15 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸುನೀಲ್‌ ಬೋಸ್‌ ಅವರನ್ನು ಸಂಘಟನೆ ಬೆಂಬಲಿಸಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಎನ್.ಮೂರ್ತಿ ಮಂಗಳವಾರ ಹೇಳಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ನಗ ಸುನಿಲ್ ಬೋಸ್ ಪ್ರತಿಭಾವಂತ ಯುವ ನಾಯಕ. ಬುದ್ದ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕುವೆಂಪು ಅವರ ಸಿದ್ದಾಂತದಲ್ಲಿ ನಂಬಿಕೆ, ಬದ್ದತೆ ಇರಿಸಿಕೊಂಡಿದ್ದಾರೆ. ಸರ್ವ ಜಾತಿಯ ಬಡವರು, ರೈತರು, ಕೂಲಿಕಾರ್ಮಿಕರ ಜೀವನ ಸುಧಾರಣೆಗೆ ಶ್ರಮಿಸಿದ್ದಾರೆ’ ಎಂದರು.

‘ಅವರ ಸರಳ, ಸಜ್ಜನಿಕೆ, ಶೋಷಿತರ ಬಗೆಗಿನ ಕಳಕಳಿಯನ್ನು ಪ್ರೋತ್ಸಾಹಿಸಬೇಕು ಎಂಬ ಉದ್ದೇಶದಿಂದ ಅವರನ್ನು ಬೆಂಬಲಿಸುವ ತೀರ್ಮಾನ ಕೈಗೊಂಡಿದ್ದೇವೆ. ಬಿಜೆಪಿಯಿಂದ ಈ ದೇಶದ ಸಂವಿಧಾನಲ್ಲೆ ಸಂಚಕಾರ ಬಂದಿದೆ. ಸಂವಿಧಾನ ಸಂರಕ್ಷಣೆ, ದೇಶದ ಹಿತದೃಷ್ಠಿಯಿಂದ ಈ ಬಾರಿಯ ಚುನಾವಣೆಯಲ್ಲಿ  ಜನತೆ ಕಾಂಗ್ರೆಸ್ ಬೆಂಬಲಿಸಿ, ಕೋಮುವಾದಿ, ಹಿಂದುತ್ವವಾದಿ ಬಿಜೆಪಿ ಸೋಲಿಸಬೇಕು’ ಎಂದರು. 

ಮುಖಂಡ ಬೈಲಹೊನ್ನಯ್ಯ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT