ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನೀಲ್‌ ಬೋಸ್‌ ವಿರುದ್ಧ ‘ಗೋ ಬ್ಯಾಕ್‌’ ಭಿತ್ತಿಪತ್ರ

Published 3 ಏಪ್ರಿಲ್ 2024, 19:16 IST
Last Updated 3 ಏಪ್ರಿಲ್ 2024, 19:16 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನೀಲ್‌ ಬೋಸ್‌ ಅವರನ್ನು ಉಲ್ಲೇಖಿಸಿ ‘ಮರಳು ಮಾಫಿಯಾದ ಅನಭಿಷಿಕ್ತ ದೊರೆ ಗೋ ಬ್ಯಾಕ್‌’ ಎಂಬ ಭಿತ್ತಿಪತ್ರಗಳನ್ನು ನಗರದ ಅಲ್ಲಲ್ಲಿ ಅಂಟಿಸಲಾಗಿತ್ತು. 

ಬುಧವಾರ ಸುನೀಲ್‌ ಬೋಸ್‌ ಅವರು ನಾಮಪತ್ರ ಸಲ್ಲಿಸಿದರು. ಅವರ ಪರವಾಗಿ ರೋಡ್‌ ಶೋ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಸಚಿವರು ಬರುತ್ತಿದ್ದುದನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ಮಂಗಳವಾರ ರಾತ್ರಿ ಭುವನೇಶ್ವರಿ ವೃತ್ತ, ಕೊಳ್ಳೇಗಾಲ ರಸ್ತೆ, ನಂಜನಗೂಡು ರಸ್ತೆಯ ಅಲ್ಲಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿದ್ದರು. 

ವಿಷಯ ಗೊತ್ತಾಗುತ್ತಲೇ ಪೊಲೀಸರು ಎಲ್ಲ ಭಿತ್ತಿಪತ್ರಗಳನ್ನು ತೆರವುಗೊಳಿಸಿದರು. ಅಷ್ಟರಲ್ಲಾಗಲೇ ಕೆಲವರು ಅವುಗಳ ಫೋಟೊ, ವಿಡಿಯೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. 

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸುನೀಲ್‌ ಬೋಸ್‌, ‘ಮರಳು ವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್‌ನಲ್ಲಿ ಇತ್ತು. ನ್ಯಾಯಾಲಯ ನನ್ನನ್ನು ನಿರ್ದೋಷಿ ಎಂದು ಹೇಳಿದೆ. ಇದು ಬಿಜೆಪಿಯವರ ಕೆಲಸ ಆಗಿರಬಹುದು. ಅವರಿಗೆ ಮಾಡುವುದಕ್ಕೆ ಬೇರೇನೂ ಕೆಲಸ ಇಲ್ಲ. ಹತಾಶೆಯಿಂದ ಈ ರೀತಿ ಮಾಡಿರುತ್ತಾರೆ’ ಎಂದರು. 

ಬೋಸ್‌ ತಂದೆ, ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಪ್ರತಿಕ್ರಿಯಿಸಿ, ‘ತಲೆ ಕೆಟ್ಟವರು ಮಾಡಿರುವ ಪಿತೂರಿ ಇದು. ಕ್ಷೇತ್ರದ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆಗಳನ್ನು ಮಾಡಿದ್ದೇವೆ. ಅಲ್ಲೆಲ್ಲೂ ವಿರೋಧ ಕಂಡು ಬಂದಿಲ್ಲ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT