ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಬೀದಿ ನಾಯಿ ದಾಳಿಗೆ ಮೇಕೆ ಸಾವು

Published 13 ಮೇ 2024, 13:45 IST
Last Updated 13 ಮೇ 2024, 13:45 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಕೆಸ್ತೂರಿನಲ್ಲಿ ಸೋಮವಾರ ನಾಯಿಗಳ ಗುಂಪು ಮೇಕೆ ಮೇಲೆ ದಾಳಿ ಮಾಡಿದ್ದು, ಒಂದು ಮರಿ ಮೃತಪಟ್ಟಿದೆ.

ಈಚೆಗೆ ಗ್ರಾಮದಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದೆ. ಜಾನುವಾರುಗಳ ಮೇಲೆ ಪದೇ ಪದೇ ದಾಳಿ ಮಾಡುತ್ತಿವೆ. ಸಾಕಣೆದಾರರು ಇಲ್ಲದಿದ್ದರೆ ಕಚ್ಚಿ ಕೊಲ್ಲುತ್ತವೆ.

‘ಮೇಕೆಗಳು ಸಂಜೆ ವಾಪಸ್ ಮನೆಗೆ ಬರುವಾಗ ₹15 ಸಾವಿರದ ಮೇಕೆಯನ್ನು ನಾಯಿಗಳು ಕೊಂದಿವೆ. ಮಕ್ಕಳು ಮತ್ತು ಮಹಿಳೆಯರ ಮೇಲೆಯೂ ದಾಳಿ ಮಾಡುತ್ತವೆ. ಇದರಿಂದ ಗ್ರಾಮಸ್ಥರು ಜೀವ ಭಯದಲ್ಲಿ ಸಂಚರಿಸಬೇಕಿದೆ. ಸಂಬಂಧಪಟ್ಟವರು ನಷ್ಟ ಭರಿಸಬೇಕು’ ಎಂದು ಮೇಕೆ ಮಾಲೀಕ ಸಿದ್ದಮಾದಯ್ಯ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT