ಚಾಮರಾಜನಗರ: ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರಿನ ಟೆಕ್ಸಾಕ್ ಸಂಸ್ಥೆ ಸಹಯೋಗದಲ್ಲಿ ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿರುವ ಗ್ರಾಸಿಮ್ ಇಂಡಸ್ಟ್ರೀಸ್ನಲ್ಲಿ ರಫ್ತು, ಜಾಗೃತಿ ಕಾರ್ಯಕ್ರಮ ನಡೆಯಿತು.

ಬೆಂಗಳೂರಿನ ಟೆಕ್ಸಾಕ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ‘ಎಂಎಸ್ಎಂಇ ರ್ಯಾಂಪ್ ಕಾರ್ಯಕ್ರಮದಡಿಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ತಾಂತ್ರಿಕ, ಹಣಕಾಸು ಹಾಗೂ ರಫ್ತು ಉತ್ತೇಜನ ಕಾರ್ಯಕ್ರಮಗಳ ನೆರವು ಪಡೆದುಕೊಂಡು ಉದ್ಯಮ ಸ್ಥಾಪಿಸಬೇಕು, ಉದ್ಯೋಗ ಸೃಷ್ಟಿಯ ಜೊತೆಗೆ ಆರ್ಥಿಕ ಅಭಿವೃದ್ಧಿ ಸಾಧಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊರೈರಾಜ್ ಮಾತನಾಡಿ ‘ಉದ್ಯಮ ಆರಂಭಕ್ಕೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು ಉದ್ಯಮಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ರಫ್ತು, ಜಾಗೃತಿ ಕಾರ್ಯಕ್ರಮಗಳ ಲಾಭ ಪಡೆದುಕೊಂಡು ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದ ಅವರು, ಉದ್ಯಮಿಗಳಿಗೆ ಲಭ್ಯವಿರುವ ಸರ್ಕಾರದ ವಿವಿಧ ಸೌಲಭ್ಯಗಳ ಕುರಿತು ವಿವರಿಸಿದರು.

ಜಿಲ್ಲಾ ಕೆಎಸ್ಎಫ್ಸಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಎಂ.ಆರ್ ಪ್ರಮಿಳಾ ಕೆಎಸ್ಎಫ್ಸಿ ಮೂಲಕ ಒದಗಿಸಲಾಗುತ್ತಿರುವ ಸಾಲ ಸೌಲಭ್ಯ, ಯೋಜನೆಗಳು ಹಾಗೂ ಮಹಿಳಾ ಉದ್ಯಮಿಗಳಿಗೆ ನೀಡಲಾಗುತ್ತಿರುವ ವಿಶೇಷ ಪ್ರೋತ್ಸಾಹಗಳ ಕುರಿತು ಮಾಹಿತಿ ನೀಡಿದರು.

ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದ ಗ್ರಾಸಿಮ್ ಇಂಡಸ್ಟ್ರೀಸ್ ಪ್ಲಾಂಟ್ ಹೆಡ್ ಬ್ರೀದ್ ಕುಮಾರ್ ಉತ್ಪಾದನಾ ಕ್ಷೇತ್ರದಲ್ಲಿ ವರ್ಟಿಕ್ಯಾಲಿಟಿ, ತಂತ್ರಜ್ಞಾನ ಬಳಕೆ ಹಾಗೂ ಗುಣಮಟ್ಟದ ಉತ್ಪಾದನೆಯ ಮಹತ್ವ ಕುರಿತು ವಿವರಿಸಿದರು.

ನಗರದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪ್ರಭಾಕರ್ ಕೈಗಾರಿಕಾ ಅಭಿವೃದ್ಧಿಗೆ ವ್ಯಾಪಾರ ಸಂಪರ್ಕಗಳು ಹಾಗೂ ಉದ್ಯಮಿಗಳ ಸಹಕಾರದ ಅಗತ್ಯತೆಯ ಕುರಿತು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ಅರವಿಂದ್ ಭಟ್ ರಫ್ತು ನಿಯಮದ ಬಗ್ಗೆ ಉದ್ದಿಮೆಗಳಿಗೆ ಅರಿವು ಮೂಡಿಸಿದರು. ನಂತರ ನಡೆದ ತಾಂತ್ರಿಕ ಅಧಿವೇಶನದಲ್ಲಿ ರಫ್ತು ನಿಯಮಗಳು, ಮೂಲಭೂತ ಅವಶ್ಯಕತೆಗಳು, ದಾಖಲೆ ಪ್ರಕ್ರಿಯೆ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆ ಪ್ರವೇಶ ಕುರಿತು ಮಾಹಿತಿ ನೀಡಲಾಯಿತು. ಜಿಲ್ಲೆಯ ವಿವಿಧ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.