ಚಾಮರಾಜನಗರ: 15 ದಿನಗಳ ಹಿಂದಷ್ಟೆ ಕೆ.ಜಿಗೆ 20ಕ್ಕೆ ಸಿಗುತ್ತಿದ್ದ ಟೊಮೆಟೊ ದರ ಪ್ರಸ್ತುತ ಮೂರು ಪಟ್ಟು ಹೆಚ್ಚಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹60 ರಿಂದ ₹70ರವರೆಗೂ ಮುಟ್ಟಿದ್ದು ಗ್ರಾಹಕರಿಗೆ ದರ ಏರಿಕೆಯ ಬಿಸಿ ತಟ್ಟಿದೆ.

ಜಿಲ್ಲೆಯ ಮಾರುಕಟ್ಟೆಗಳಿಗೆ ಸ್ಥಳೀಯವಾಗಿ ಸೇರಿದಂತೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದ ಟೊಮೆಟೊ ಪೂರೈಕೆಯಾಗುತ್ತದೆ. ಟೊಮೆಟೊ ಬಿತ್ತನೆ ಅವಧಿಯಲ್ಲಿ ಸುರಿದ ಭಾರಿ ಮಳೆಗೆ ಗಿಡಗಳ ನಾಶ, ಇಳುವರಿ ಕುಸಿತದ ಪರಿಣಾಮ ಮಾರುಕಟ್ಟೆಯ ಬೇಡಿಕೆಷ್ಟು ಟೊಮೆಟೊ ಪೂರೈಕೆಯಾಗುತ್ತಿಲ್ಲ.

ಹೊರ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಉತ್ಪಾದನೆ ಹಾಗೂ ಪೂರೈಕೆಯಲ್ಲಿ ಭಾರಿ ಕುಸಿತವಾಗಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ವಾರ ₹40ಕ್ಕೆ ಸಿಗುತ್ತಿದ್ದ ಟೊಮೆಟೊ ಈ ವಾರ ₹60ಕ್ಕೆ ಮುಟ್ಟಿದೆ. ಮಾರುಕಟ್ಟೆಗೆ ಆವಕ ಹೆಚ್ಚಾಗದಿದ್ದರೆ ಶತಕದ ಗಟಿ ಮುಟ್ಟುವ ಸಾಧ್ಯತೆಗಳಿವೆ ಎನ್ನುತ್ತಾರೆ ವ್ಯಾಪಾರಿ ಶ್ರೀನಿವಾಸ್.

ಸಾಂಬಾರ್, ರಸಂ, ಚಟ್ನಿ ಸಹಿತ ಮಸಾಲೆಯುಕ್ತ ಪದಾರ್ಥಗಳ ತಯಾರಿಕೆಗೆ ಟೊಮೆಟೊ ಹೆಚ್ಚಾಗಿ ಬಳಕೆಯಾಗುತ್ತದೆ. ಹೋಟೆಲ್ ರೆಸ್ಟೊರೆಂಟ್ಗಳಲ್ಲಿ ಗ್ರೇವಿ ತಯಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವುದರಿಂದ ಪ್ರತಿದಿನ ಕಡ್ಡಾಯವಾಗಿ ಖರೀದಿ ಮಾಡಲಾಗುತ್ತದೆ. ದರ ಮೂರು ಪಟ್ಟು ಹೆಚ್ಚಾಗಿರುವುದು ಹೋಟೆಲ್ ಉದ್ಯಮಕ್ಕೆ ಪೆಟ್ಟು ಬೀಳುತ್ತಿದೆ ಎನ್ನುತ್ತಾರೆ ಹೋಟೆಲ್ ಮಾಲೀಕ ಕೃಷ್ಣಪ್ಪ.

ದರ ಹೆಚ್ಚಾಗಿರುವುದರ ಜೊತೆಗೆ ಗುಣಮಟ್ಟದ ಟೊಮೆಟೊ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ತೊಟ್ಟಿನ ಭಾಗದಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತಿದ್ದು ಜಾಗರೂಕತೆಯಿಂದ ಆರಿಸಿದರೂ ಒಂದು ಕೆ.ಜಿಯಲ್ಲಿ ಮೂರರಿಂದ ನಾಲ್ಕು ಹಣ್ಣುಗಳು ಹಾಳಾಗಿರುತ್ತದೆ. ದರ ಹೆಚ್ಚಾಗಿರುವುದರಿಂದ ಖರೀದಿ ಪ್ರಮಾಣ ಕಡಿಮೆಯಾಗಿದೆ. ಟೊಮೆಟೊ ಜೊತೆಗೆ ಹುಳಿಗಾಗಿ ಹುಣಸೆಹಣ್ಣು ಬಳಕೆ ಮಾಡುತ್ತಿದ್ದೇವೆ ಎನ್ನುತ್ತಾರೆ ಗೃಹಣಿ ಶ್ರೀಲಕ್ಷ್ಮಿ.

ತೊಗರಿ ಅವರೇಕಾಯಿಗೆ ಬೇಡಿಕೆ

ಚಳಿಗಾಲದಲ್ಲಿ ವಿಶೇಷವಾಗಿ ಸಿಗುವ ಅವರೇಕಾಯಿ ಹಾಗೂ ತೊಗರಿಕಾಯಿಗೆ ಬೇಡಿಕೆ ಹೆಚ್ಚಾಗಿದೆ. ಆವಕ ಹೆಚ್ಚಾಗಿದ್ದರೂ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಕೆ.ಜಿ ಅವರೇಕಾಯಿಗೆ ₹60 ರಿಂದ ₹70, ತೊಗರಿಕಾಯಿಗೆ ₹50 ರಿಂದ ₹60 ಇದೆ. ದಪ್ಪ ಕಾಳುಗಳಿರುವ ಅವರೇಕಾಯಿಗೆ ₹70 ರಿಂದ 80ರವರೆಗೂ ದರ ಇದೆ. ಬೆಲೆ ಹೆಚ್ಚಾಗಿದ್ದರೂ ಗ್ರಾಹಕರಿಂದ ಬೇಡಿಕೆ ಕುಸಿದಿಲ್ಲ, ಉತ್ತಮ ವ್ಯಾಪಾರ ನಡೆಯುತ್ತಿದೆ ಎನ್ನುತ್ತಾರೆ ವ್ಯಾಪಾರಿ ಮಂಜುನಾಥ್.

ಇತರೆ ತರಕಾರಿಗಳ ದರ ಸ್ಥಿರ

ಟೊಮೆಟೊ ಹೊರತಾಗಿ ಇತರೆ ತರಕಾರಿಗಳ ದರ ಸ್ಥಿರವಾಗಿದೆ. ಈರುಳ್ಳಿ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು ಗಾತ್ರದ ಆಧಾರದ ಮೇಲೆ ಕೆ.ಜಿಗೆ ₹20 ರಿಂದ ₹30 ಇದೆ. ಮಾರುಕಟ್ಟೆಯಲ್ಲಿ ₹ 100ಕ್ಕೆ 5 ರಿಂದ 6ಕೆ.ಜಿವರೆಗೂ ದೊರೆಯುತ್ತಿದೆ. ಬೀನ್ಸ್, ಕ್ಯಾರೆಟ್, ಆಲೂಗಡ್ಡೆ, ಈರೇಕಾಯಿ ಕೆ.ಜಿಗೆ ₹40 ಇದೆ.

ಮೊಟ್ಟೆ ದರ ಹೆಚ್ಚಳ

ಮೊಟ್ಟೆ ದರ ಏರುಮುಖವಾಗಿ ಸಾಗುತ್ತಿದ್ದು ಚಿಲ್ಲರೆ ಅಂಗಡಿಗಳಲ್ಲಿ ಒಂದು ಮೊಟ್ಟೆಗೆ ₹ 7 ರಿಂದ ₹7.50ರವರೆಗೆ ಬೆಲೆ ಇದೆ. ಚಳಿಗಾಲದಲ್ಲಿ ಮಾಂಸಾಹಾರ ಖಾದ್ಯಗಳ ಜೊತೆಗೆ ಮೊಟ್ಟೆ ಬಳಕೆ ಹೆಚ್ಚಾಗಿರುವುದು ದರ ಏರಿಕೆಗೆ ಕಾರಣ. ತಿಂಗಳ ಹಿಂದೆ ₹ 6 ದರ ಇತ್ತು. ಹಂತಹಂತವಾಗಿ ದರ ಹೆಚ್ಚಳವಾಗುತ್ತ ಸಧ್ಯ ₹7.50ಕ್ಕೆ ತಲುಪಿದೆ. ಕೆಲವು ಕಡೆಗಳಲ್ಲಿ ₹ 8ಕ್ಕೆ ಮಾರಾಟವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

ಬಾಳೆಹಣ್ಣಿನ ದರ ಇಳಿಕೆ

ಹಬ್ಬ ಹಾಗೂ ಉತ್ಸವಗಳ ಸಂದರ್ಭ ಕೆ.ಜಿಗೆ ₹100ಕ್ಕೆ ಮುಟ್ಟಿದ್ದ ಏಲಕ್ಕಿ ಬಾಳೆಹಣ್ಣಿನ ದರ ಕುಸಿತವಾಗಿದೆ. ಗಾತ್ರದ ಅನುಗುಣವಾಗಿ ಕೆ.ಜಿಗೆ ₹50 ರಿಂದ ₹70 ಇದೆ. ಶೀತ ವಾತಾವರಣದಲ್ಲಿ ಬಾಳೆಹಣ್ಣು ಸೇವನೆ ಪ್ರಮಾನ ತಗ್ಗುತ್ತದೆ. ಹಾಗೆಯೇ ಹಬ್ಬಗಳು ಮುಗಿದಿರುವುದರಿಂದ ಬಾಳೆಹಣ್ಣಿಗೆ ಬೇಡಿಕೆ ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ತರಕಾರಿ ದರ (ಕೆ.ಜಿ.ಗೆ ₹ ಗಳಲ್ಲಿ)

ಈರುಳ್ಳಿ;25–30 ಟೊಮೆಟೊ;60–70 ಕ್ಯಾರೆಟ್;40 ಬೀನ್ಸ್;40 ಹಿರೇಕಾಯಿ;40 ಬೆಂಡೆಕಾಯಿ;40 ಬದನೆಕಾಯಿ;30 ಗೆಡ್ಡೆಕೋಸು;50–60 ಬೀಟ್ರೂಟ್;40 ಹಾಗಲಕಾಯಿ;50 ಆಲೂಗಡ್ಡೆ;40 ತೊಗರಿಕಾಯಿ;50-60 ಅವರೆಕಾಯಿ;60 ಎಲೆಕೋಸು;20–30 ತೊಂಡೆಕಾಯಿ;40–50 ಚವಳಿಕಾಯಿ;40 ಅಲಸಂದೆ;50–60 ಗೆಡ್ಡೆಕೋಸು;60–80

ಹಣ್ಣುಗಳ ದರ (ಕೆ.ಜಿ₹ಗಳಲ್ಲಿ)

ಸೇಬು;100–120 ದಾಳಿಂಬೆ;120–160 ಪಪ್ಪಾಯ; 40 ಸಪೋಟ;80–100 ಸೀತಾಫಲ;80–100 ಏಲಕ್ಕಿ ಬಾಳೆ;50–70 ಪಚ್ಚಬಾಳೆ; 40

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.