ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರು: ಅನೈರ್ಮಲ್ಯ ಜೋರು

Last Updated 16 ಡಿಸೆಂಬರ್ 2015, 8:44 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಸಮೀಪದ ಯಡಿ ಯೂರು ಗ್ರಾಮದಲ್ಲಿ ಸಮರ್ಪಕವಾಗಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳ ಮುಂಭಾಗ ಬೀದಿಗಳಲ್ಲಿಯೇ ತ್ಯಾಜ್ಯ ನೀರು ಹರಿಯುತ್ತಿದೆ. ಇದರಿಂದ ಬಡಾವಣೆಯಲ್ಲಿ ಅನೈರ್ಮಲ್ಯ ಉಂಟಾ ಗಿದೆ. ಜನಸಂಚಾರಕ್ಕೂ ತೊಂದರೆಯಾ ಗಿದೆ. ಸೊಳ್ಳೆ, ಕ್ರಿಮಿಕೀಟ, ಹುಳ ಹುಪ್ಪಟೆ ಗಳ ಸಂಖ್ಯೆ ಹೆಚ್ಚಿದ್ದು, ನಿವಾಸಿಗಳು ದುರ್ವಾಸನೆಯನ್ನು ಅನಿವಾರ್ಯವಾಗಿ ಸಹಿಸಿಕೊಳ್ಳುವಂತಾಗಿದೆ. ಇದರಿಂದ ನಿವಾಸಿಗಳು ರೋಗ– ರುಜಿನಗಳ ಭೀತಿ ಎದುರಿಸಬೇಕಾಗಿದೆ.

ನಿರ್ಮಾಣವಾಗಿರುವ ಕೆಲ ಚರಂಡಿ ಗಳಲ್ಲಿ ಹೂಳು ತುಂಬಿದೆ. ಚರಂಡಿ ಸ್ವಚ್ಛಗೊಳಿಸಿ ನೀರು ಸರಾಗ ವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಿಲ್ಲ.

ಗ್ರಾಮದಲ್ಲಿ ಬಡಾವಣೆ ನಿರ್ಮಾಣ ಗೊಂಡು ಹಲವು ವರ್ಷಗಳು ಕಳೆದಿ ದ್ದರೂ ಇಲ್ಲಿ ಚರಂಡಿ ನಿರ್ಮಿಸಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಕಸದ ಗುಂಡಿಗಳು ನಿರ್ಮಾಣವಾಗಿವೆ. ರಸ್ತೆಯೂ ಕಳಪೆ ಯಾಗಿದೆ. ರಸ್ತೆಯಲ್ಲಿ ಹರಿಯುವ ಕೊಳಚೆ ನೀರನ್ನು ತುಳಿದುಕೊಂಡು ತಿರುಗಾಡ ಬೇಕಾಗಿದೆ ಎಂಬುದು ಇಲ್ಲಿನ ಮಹಿಳೆ ಯರ ದೂರು.

ಹೊಸ ಬಡಾವಣೆಯಲ್ಲಿ ನಿರ್ಮಾಣ ವಾಗಿರುವ ಕಿರುನೀರು ಸರಬರಾಜು ಘಟಕದ ತೊಂಬೆಯ ಸುತ್ತಲೂ ಕಳೆ ಗಿಡಗಳು ಬೆಳೆದುಕೊಂಡಿವೆ. ಇದರ ಸನಿಹದಲ್ಲಿಯೇ ತಿಪ್ಪೆಗುಂಡಿಗಳು ನಿರ್ಮಾಣವಾಗಿವೆ. ತೊಂಬೆಯ ಸುತ್ತ ಅನೈರ್ಮಲ್ಯ ಉಂಟಾಗಿದೆ. ಆದರೂ ಅನಿವಾರ್ಯವಾಗಿ ಇದೇ ನೀರು ಬಳಸಬೇಕಿದೆ.

ಬಡಾವಣೆಗಳಲ್ಲಿ ಸಮರ್ಪಕವಾಗಿ ಚರಂಡಿ ನಿರ್ಮಿಸಬೇಕು. ರಸ್ತೆ ದುರಸ್ತಿ ಪಡಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸ್ಥಳೀಯ ರಾದ ಬಸವರಾಜು, ಶಿವಕುಮಾರ ಮಂಗಲ ಗ್ರಾಮ ಪಂಚಾಯಿತಿ ಆಡಳಿತ ವನ್ನು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT