ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂತರಿಕ ಕಚ್ಚಾಟಕ್ಕೆ ನೆಲಕಚ್ಚಿದ ಕಾಂಗ್ರೆಸ್‌

ಸೋಲಿನ ಪರಾಮರ್ಶೆಗೆ ಮುಂದಾದ ‘ಕೈ’ ಮುಖಂಡರು
Last Updated 17 ಮೇ 2018, 9:33 IST
ಅಕ್ಷರ ಗಾತ್ರ

ಹಾಸನ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಹಲವು ಕಾರಣ ಎಂದು ಹೇಳುತ್ತಿದ್ದರೂ, ಪಕ್ಷದೊಳಗಿನ ಆಂತರಿಕ ಕಚ್ಚಾಟ ನೆಲಕಚ್ಚಲು ಕಾರಣ ಎನ್ನಲಾಗಿದೆ.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಕಳೆದ ಬಾರಿ ಎರಡು ಕ್ಷೇತ್ರ (ಬೇಲೂರು, ಅರಕಲಗೂಡು) ಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಶೂನ್ಯ ಸಾಧನೆಯಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಎಲ್ಲ ಕ್ಷೇತ್ರಗಳ ಪಕ್ಷದ ಅಭ್ಯರ್ಥಿ ಗಳನ್ನು ಗೆಲುವಿನ ದಡ ಸೇರಿಸುವ ಹೊಣೆ ಹೊತ್ತಿದ್ದ ಎ.ಮಂಜು ಸಹ ಪರಾಭವಗೊಂಡಿದ್ದಾರೆ. ಸಚಿವರಾಗಿದ್ದ ಅವಧಿಯಲ್ಲಿ ಮಂಜು, ಜಿಲ್ಲೆಯ ಬೇರೆಲ್ಲ ಕ್ಷೇತ್ರಗಳಿಗಿಂತಲೂ ಹೆಚ್ಚು ಸ್ವ ಕ್ಷೇತ್ರ ಅರಕಲಗೂಡಿನತ್ತಲೇ ತಮ್ಮ ಗಮನ ಕೇಂದ್ರೀಕರಿಸಿದ್ದರು. ಕ್ಷೇತ್ರದಲ್ಲಿ ಗುಪ್ತಗಾಮಿನಿಯಾಗಿದ್ದ ಆಡಳಿತ ವಿರೋಧಿ ಅಲೆ ಜತೆಗೆ ಅತಿಯಾದ ಆತ್ಮವಿಶ್ವಾಸ, ಮುಖಂಡರು, ಕಾರ್ಯಕ ರ್ತರ ಜತೆ ಸಮನ್ವಯತೆ ಸಾಧಿಸುವಲ್ಲಿ ವಿಫಲರಾಗಿದ್ದು ಸೋಲಿನ ದವಡೆಗೆ ತಳ್ಳಿದೆ ಎಂದು ವಿಶ್ಲೇಷಿಸಲಾಗಿದೆ.

ಆದರೆ, ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿರುವ ವಿಷಯಗಳೇ ಬೇರೆ. ಅವುಗಳಲ್ಲಿ ಪ್ರಮುಖವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಾಯಕರು ಜಿಲ್ಲೆಯ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬಾರದಿರುವುದು, ಸಚಿವ ಎ.ಮಂಜು, ತಮ್ಮ ಕ್ಷೇತ್ರ ಹೊರತುಪಡಿಸಿ, ಜಿಲ್ಲೆಯ ಇತರೆ ಕ್ಷೇತ್ರದತ್ತ ತಲೆ ಹಾಕದೆ ಇದ್ದದ್ದು, ಕೆಲ ಕ್ಷೇತ್ರಗಳಿಗೆ ಪಕ್ಷದ ಪಾರ್ಟಿ ಫಂಡ್‌ ನೀಡದಿರುವುದು, ಪಕ್ಷ ಸಂಘಟನೆಯಲ್ಲಿ ಸಚಿವರ ನಿರಾಸಕ್ತಿ, ಹೊರಗಿನವರನ್ನು ಕಡೇ ಕ್ಷಣದಲ್ಲಿ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಿದ್ದು, ಬೇಲೂರಿನಲ್ಲಿ ಎಂ.ಎನ್.ಕೀರ್ತನಾ ಪರ ಪ್ರಚಾರ ಮಾಡದ ಕೆಪಿಸಿಸಿ ಉಪಾಧ್ಯಕ್ಷ ಬಿ.ಶಿವರಾಮು ಹಾಗೂ ಸಕಲೇಶಪುರದಲ್ಲಿ ಸಿದ್ದಯ್ಯಗೆ ಸ್ಥಳೀಯ ಮುಖಂಡರು ಬೆಂಬಲ ದೊರಕದೇ ಇದ್ದದ್ದು..

ಈ ಎಲ್ಲಾ ಕಾರಣಗಳಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. ಇದರ ಲಾಭ ಪಡೆದ ಜೆಡಿಎಸ್, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸೋತರೂ, ಉಳಿದ 6 ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿತು.

ಬಿಜೆಪಿ ಅಭ್ಯರ್ಥಿಗಳ ಪರವಾಗಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಚಾರ ನಡೆಸಿ ಹೋದರೂ ಗೆಲ್ಲಲು ಸಾಧ್ಯವಾ ಗಿದ್ದು ಒಂದೇ ಕ್ಷೇತ್ರ. ಯೋಗಾ ರಮೇಶ್ ಮತ್ತೊಮ್ಮೆ ಸೋಲು ಕಂಡರು. ಬೇಲೂರಿನಲ್ಲಿ ಎಚ್‌.ಕೆ.ಸುರೇಶ್, ಸಕಲೇಶಪುರದಲ್ಲಿ ಜೆ.ಸೋಮಶೇಖರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದಷ್ಟೇ ಸಮಾಧಾನ.

ಸೋಲಿಗೆ ಸಾಮೂಹಿಕ ಜವಾಬ್ದಾರಿ

ರಾಜಕಾರಣದಲ್ಲಿ ಸೋಲು, ಗೆಲುವು ಸಾಮಾನ್ಯ. ಮತದಾರರ ತೀರ್ಮಾನವನ್ನು ಗೌರವಿಸಲೇಬೇಕು. ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಸೋಲಿನ ಜವಾಬ್ದಾರಿಯನ್ನು ಸಾಮೂಹಿಕವಾಗಿ ಹೊರಲಾಗುವುದು. ಎಲ್ಲಿ ಎಡವಿದ್ದೇವೆ ಅಲ್ಲಿ ಸರಿಪಡಿಸಿಕೊಂಡು ಪಕ್ಷ ಸಂಘಟನೆ ಮಾಡಲಾಗುವುದು ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ  ಜಾವಗಲ್‌ ಮಂಜುನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT