ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ | ವಿಧಾನಪರಿಷತ್ ಚುನಾವಣೆ: ಪೂರ್ವ ಸಿದ್ಧತೆ

Published 2 ಜೂನ್ 2024, 13:16 IST
Last Updated 2 ಜೂನ್ 2024, 13:16 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕು ಕಚೇರಿಯ ಮತಗಟ್ಟೆ ಸಂಖ್ಯೆ 23ರಲ್ಲಿ ಸೋಮವಾರ ನಡೆಯಲಿರುವ ರಾಜ್ಯ ವಿಧಾನಪರಿಷತ್‌ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾನಕ್ಕೆ ಮಾಡಿರುವ ಪೂರ್ವ ಸಿದ್ಧತೆಗಳನ್ನು ಸಹ ಚುನಾವಣಾಧಿಕಾರಿ, ಪ್ರಶಾಂತ್ ಕೆ.ಪಾಟೀಲ ಪರಿಶೀಲನೆ ಮಾಡಿದರು.

ಇದೇ ಪ್ರಥಮ ಬಾರಿಗೆ ಚೇಳೂರು ತಾಲ್ಲೂಕು ಕಚೇರಿಯ ಮತಕೇಂದ್ರ 24ರಲ್ಲಿ ವಿಧಾನಪರಿಷತ್‌ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾನ ನಡೆಯಲಿದೆ. ಬಾಗೇಪಲ್ಲಿ ತಾಲ್ಲೂಕಿಗೆ ಸಂಬಂಧಿಸಿದಂತೆ ಕಸಬಾ, ಗೂಳೂರು, ಪಾತಪಾಳ್ಯ, ಮಿಟ್ಟೇಮರಿಯ ಹೋಬಳಿ ಕೇಂದ್ರಗಳು ಮತದಾನ ಕೇಂದ್ರಕ್ಕೆ ಒಳಪಡಲಿದೆ. ತಾಲ್ಲೂಕಿನಲ್ಲಿ 376 ಮತದಾರರ ಪೈಕಿ, ಪುರುಷರು 257 ಹಾಗೂ 119 ಮಹಿಳಾ ಮತದಾರರು ಇದ್ದಾರೆ.

ಮತದಾನದ ಸಮಯ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರಿಗೂ ಮತದಾನ ನಡೆಯಲಿದೆ. ಮತದಾನ ಕೇಂದ್ರದಲ್ಲಿ ಪ್ರಥಮ ಬಾರಿಗೆ ವೆಬ್‌ಕಾಸ್ಟಿಂಗ್ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಮತದಾನದ ಕೇಂದ್ರದ ಒಳಗೆ ಮೊಬೈಲ್ ನಿಷೇಧ ಮಾಡಲಾಗಿದೆ ಎಂದು ಸಹ ಚುನಾವಣಾಧಿಕಾರಿ ತಿಳಿಸಿದರು.

ತಾಲ್ಲೂಕು ಕಚೇರಿಯ ಮತದಾನ ಕೇಂದ್ರದಲ್ಲಿ ಮತಗಟ್ಟೆ, ಸಹಮತಗಟ್ಟೆ ಅಧಿಕಾರಿ, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕೇಂದ್ರದ ಮುಂದೆ ಸಹಾಯಕ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT