ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಸಮಾವೇಶ

Published 20 ಮಾರ್ಚ್ 2024, 15:48 IST
Last Updated 20 ಮಾರ್ಚ್ 2024, 15:48 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ತಾತ್ಕಾಲಿಕ ಗ್ಯಾರಂಟಿಗಳಿಗೆ ಮಾರು ಹೋಗದೆ, ಬದುಕನ್ನು ಹಸನು ಮಾಡಿಕೊಳ್ಳುವ ಯೋಜನೆಗಳಿಗಾಗಿ ಮತ ಕೊಡಿ. ಮತ್ತೊಮ್ಮೆ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಿ’ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಮನವಿ ಮಾಡಿದರು.

ಶಿಡ್ಲಘಟ್ಟ ನಗರದಲ್ಲಿನ ಬಿಜೆಪಿ ಸೇವಾ ಸೌಧ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶ ಮತ್ತು ಸಾಮಾಜಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಬದುಕನ್ನು ಕಟ್ಟಿಕೊಳ್ಳುವಂತ ಯೋಜನೆಗಳನ್ನು ಬಿಜೆಪಿ, ಮೋದಿ ಅವರಂಥ ಸಮರ್ಥ ಪ್ರಧಾನ ಮಂತ್ರಿಯಿಂದಷ್ಟೇ ನೀಡಲು ಸಾಧ್ಯ ಎಂದರು.

‘ಕಾಂಗ್ರೆಸ್ ಪಕ್ಷದ ಕ್ಷಣಿಕ ಲಾಭ ನೀಡುವ ಗ್ಯಾರಂಟಿ ಯೋಜನೆಗಳಿಗೆ ಮಾರುಹೋಗಬೇಡಿ. ಮೋದಿ ಜಾರಿ ಮಾಡಿದ ಜನಪರ ಯೋಜನೆ ಎಂದಿಗೂ ನಿಲ್ಲುವುದಿಲ್ಲ’ ಎಂದರು.

ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ‘ರಾಜ್ಯದಲ್ಲಿ ಬಿಜೆಪಿಯು ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು ಒಂದೆರಡು ದಿನಗಳಲ್ಲಿ ನಾವು ಜೆಡಿಎಸ್‌ನೊಂದಿಗೆ ಸೇರಿ ಚುನಾವಣೆ ಮಾಡಬೇಕೇ, ಇಲ್ಲವೇ ಬಿಜೆಪಿಗೆ ಕೆಲಸ ಮಾಡಬೇಕಾ ಎಂಬುದು ನಿರ್ಣಯವಾಗುತ್ತದೆ’ ಎಂದರು.

‘ಮೋದಿ ಪ್ರಧಾನಿಯಾಗಿ ಒಬಿಸಿ ವರ್ಗಕ್ಕೆ ಮಾಡಿದ ಅನುಕೂಲ, ಯೋಜನೆಗಳನ್ನು ಪ್ರತಿ ಮತದಾರನಿಗೂ ಮನವರಿಕೆ ಮಾಡಿಕೊಡಬೇಕು. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು’ ಎಂದರು.

ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಸೋಮಶೇಖರ್, ಅಶ್ವಿನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಆಂಜನೇಯಗೌಡ, ಲಕ್ಷ್ಮಿಪತಿ, ಕೆ.ವಿ.ಕೃಷ್ಣಮೂರ್ತಿ, ಸುಗುಣ, ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ನರೇಶ್, ವೇಣುಗೋಪಾಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT