ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ರಾಮ್ ಚರಣ್ ತೇಜ್ ಹುಟ್ಟುಹಬ್ಬ: ಅಭಿಮಾನಿಗಳಿಂದ ರಕ್ತದಾನ ಶಿಬಿರ

Published 24 ಮಾರ್ಚ್ 2024, 13:57 IST
Last Updated 24 ಮಾರ್ಚ್ 2024, 13:57 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಮೆಗಾ ಕುಟುಂಬದ ಹೆಸರಿನಲ್ಲಿ ಪ್ರತಿವರ್ಷ ಉತ್ತಮವಾದ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇವೆ. ತಾಲ್ಲೂಕಿನಲ್ಲಿ ರಕ್ತದಾನ ಶಿಬಿರ, ಬಡವರಿಗೆ ಸಹಾಯ ಮಾಡುವ ಕಾರ್ಯ ಮಾಡುತ್ತಿದ್ದೇವೆ ಎಂದು ಅಖಿಲ ಕರ್ನಾಟಕ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳ ಸೇವಾ ಸಂಘದ ರಾಜ್ಯಾಧ್ಯಕ್ಷ ಮುರಳಿಗೌಡ ಹೇಳಿದರು.

ನಗರದ ಕೋಟೆ ವೃತ್ತದ ಶ್ರೀರಾಮ ದೇವಾಲಯದಲ್ಲಿ ಭಾನುವಾರ ತೆಲುಗು ಚಲನಚಿತ್ರ ನಟ ರಾಮ್ ಚರಣ್ ತೇಜ್ ಅವರ 39ನೇ ಹುಟ್ಟುಹಬ್ಬದ ಅಂಗವಾಗಿ ಅಖಿಲ ಕರ್ನಾಟಕ ಚಿರಂಜೀವಿ ಯೂತ್ ಮೆಗಾ ಪವರ್ ಫ್ಯಾನ್ಸ್ ಅಸೋಸಿಯೇಷನ್ ಹಾಗೂ ಅಖಿಲ ಕರ್ನಾಟಕ ಪವರ್ ಸ್ಟಾರ್ ಪವನ್ ಕಲ್ಯಾಣ ಅಭಿಮಾನಿಗಳ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.

ಆಯೋಜಕ ಅಖಿಲ ಕರ್ನಾಟಕ ಚಿರಂಜೀವಿ ಯುವ ಕಾರ್ಯದರ್ಶಿ, ತಾಲ್ಲೂಕು ಸಂಘದ ಗೌರವ ಅಧ್ಯಕ್ಷ ಜೆ.ವಿ.ದಿನೇಶ್ ಬಾಬು ಮಾತನಾಡಿ, ಚಿರಂಜೀವಿ ಅವರ ಹೆಸರಿನಲ್ಲಿ ನಾಲ್ಕು ಬಾರಿ, ಪವನ್ ಕಲ್ಯಾಣ್ ಹೆಸರಲ್ಲಿ ಎರಡು ಬಾರಿ ರಾಮ್ ಚರಣ್ ಹೆಸರಿನಲ್ಲಿ ಎರಡು ಬಾರಿ ರಕ್ತದಾನ ಶಿಬಿರ ಮಾಡಿದ್ದೇವೆ. ಈಗ ಎಂಟನೇ ಬಾರಿ ಕಾರ್ಯಕ್ರಮ ಅಯೋಜಿಸಿದ್ದೇವೆ ಎಂದರು.

36 ಯೂನಿಟ್ ರಕ್ತದಾನ ಮಾಡಲಾಯಿತು. ಮೆಗಾ ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಪ್ರಮಾಣ ಪತ್ರ ನೀಡಲಾಯಿತು. ರಕ್ತವನ್ನು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಗೆ ನೀಡಲಾಯಿತು.

ರಾಜ್ಯ ಉಪಧ್ಯಕ್ಷ ಕಿರಣ್‌ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗಜೇಂದ್ರನಾಯಕ್, ಗೌರವಾಧ್ಯಕ್ಷ ಜೆ.ವಿ.ದಿನೇಶ್ ಬಾಬು, ರಾಜ್ಯ ಕಾರ್ಯದರ್ಶಿ ಹರೀಶ್, ಸಂಚಾಲಕ ಮುರಳಿ, ರಾಜ್ಯ ಸದಸ್ಯ ಸಂತೋಷ್, ಜಿಲ್ಲಾ ಅಧ್ಯಕ್ಷ ಜಿ.ನಾಯಕ್, ತಾಲ್ಲೂಕು ಅಧ್ಯಕ್ಷ ಪ್ರದೀಪ್ ಜಾನಿ, ಚೌಡಸಂದ್ರ ಶ್ರೀನಿವಾಸ್, ಗೋಪಾಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT