ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ | ಕಾರು ಪಲ್ಟಿ; ಇಬ್ಬರಿಗೆ ಗಾಯ

Published 4 ಮೇ 2024, 16:23 IST
Last Updated 4 ಮೇ 2024, 16:23 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಐಮರೆಡ್ಡಿಹಳ್ಳಿ ಸಮೀಪ ಚಿಂತಾಮಣಿ- ಕಡಪಾ ರಸ್ತೆಯಲ್ಲಿ ಶುಕ್ರವಾರ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಗೆ ಮುಗುಚಿಬಿದ್ದು ಇಬ್ಬರು ಗಾಯಗೊಂಡಿದ್ದಾರೆ.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲ್ಮನೇರು ಗಾಮದ ಕಿರಣ್ ಮತ್ತು ಅವರ ಅಣ್ಣನ ಮಗಳು ಆವಂತಿಕಾ ಗಾಯಗೊಂಡವರು.

ಕಾರು ಆಂಧ್ರಪ್ರದೇಶದ ಮದನಪಲ್ಲಿಯಿಂದ ಚಿಂತಾಮಣಿ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿತ್ತು. ಐಮರೆಡ್ಡಿಹಳ್ಳಿ ಬಳಿ ಚಾಲಕನ ಹಿಡಿತ ತಪ್ಪಿ ಮುಗುಚಿಕೊಂಡು ರಸ್ತೆಬದಿಯ ಗುಂಡಿಗೆ ಬಿದ್ದಿದೆ. ಕಾರು ಚಾಲನೆ ಮಾಡುತ್ತಿದ್ದ ಕಿರಣ್‌ ಗಂಭಿರಾವಿ ಗಾಯಗೊಂಡಿದ್ದಾರೆ. ಆವಂತಿಕಾಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಿಂತಾಮಣಿ ತಾಲ್ಲೂಕಿನ ಐಮರೆಡ್ಡಿಹಳ್ಳಿ ಬಳಿ ಅಪಘಾತಕ್ಕೀಡಾಗಿರುವ ಕಾರು.
ಚಿಂತಾಮಣಿ ತಾಲ್ಲೂಕಿನ ಐಮರೆಡ್ಡಿಹಳ್ಳಿ ಬಳಿ ಅಪಘಾತಕ್ಕೀಡಾಗಿರುವ ಕಾರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT