ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ರನಿಗೆ ಈಜು ಕಲಿಸಲು ಹೋಗಿ ಕೃಷಿಹೊಂಡದಲ್ಲಿ ಮುಳಗಿ ಮೃತಪಟ್ಟ ತಂದೆ

Published 4 ಮೇ 2024, 16:22 IST
Last Updated 4 ಮೇ 2024, 16:22 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಎಸ್.ರಾಗುಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋನಪ್ಪಲ್ಲಿ ಗ್ರಾಮದಲ್ಲಿ ಶನಿವಾರ ವ್ಯಕ್ತಿಯೊಬ್ಬರು ತಮ್ಮ ಪುತ್ರನಿಗೆ ಈಜು ಕಲಿಸಲು ಹೋಗಿ ಕೃಷಿ ಹೊಂಡದಲ್ಲಿ ಮುಳಗಿ ಮೃತಪಟ್ಟಿದ್ದಾರೆ.

ಗ್ರಾಮದ ಬಾಬು(42) ಮೃತಪಟ್ಟ ವ್ಯಕ್ತಿ.

ಬಾಬು ತಮ್ಮ ಪುತ್ರನಿಗೆ ಟ್ಯೂಬ್ ಕಟ್ಟಿ ನೀರಿಗೆ ಇಳಿಸಿ ತಾನು ನೀರಿಗೆ ಇಳಿದು ಈಜು ಕಲಿಸಿಕೊಡುತ್ತಿದ್ದರು. ಅಭ್ಯಾಸ ಬಳಿಕ ಮೇಲಕ್ಕೆ ಬರುವಾಗ ಅವಘಡ ನಡೆದಿದೆ.

ಹೊಂಡದಿಂದ ಮೇಲಕ್ಕೆ ಬರುವಾಗ ಕಾಲು ಜಾರಿ ಪುನಃ ಕೃಷಿಹೊಂಡದ ನೀರಿಗೆ ಬಾಬು ಬಿದಿದ್ದಾರೆ. ಮೊದಲೇ ಸುಸ್ತಾಗಿದ್ದ ಅವರು ನೀರಿನಿಂದ ಮೇಲಕ್ಕೆ ಬರಲಾಗದೆ ಮುಳುಗಿದ್ದಾರೆ. ಅವರ ಪುತ್ರ ತೇಜು ಜೋರಾಗಿ ಕಿರುಚಿಕೊಂಡಿದ್ದರಿಂದ ಅಕ್ಕಪಕ್ಕದ ಜಮೀನಿನಲ್ಲಿದ್ದವರು ಬಂದು ಬಾಬು ಅವರನ್ನು ರಕ್ಷಣೆ ಮಾಡಿದರು. ಆದರೆ ಅಷ್ಟು ಹೊತ್ತಿಗೆ ಬಾಬು ಮೃತಪಟ್ಟಿದ್ದರು ಎಂದು ಮೃತರ ಸಹೋದರ ಶಂಕರಪ್ಪ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮೃತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಕೆಂಚಾರ್ಲಹಳ್ಳಿ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT