ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಮನ ಸೆಳೆದ ಗೌರಿಬಿದನೂರು ಪೊಲೀಸರ ‘ಸ್ಮಶಾನ ಕುರುಕ್ಷೇತ್ರ’

Published 16 ಜನವರಿ 2024, 15:38 IST
Last Updated 16 ಜನವರಿ 2024, 15:38 IST
ಅಕ್ಷರ ಗಾತ್ರ

ಗೌರಿಬಿದನೂರು: ನಗರದ ಎಚ್‌.ಎನ್.ಕಲಾಭವನದಲ್ಲಿ ಸೋಮವಾರ ರಾತ್ರಿ ಪೊಲೀಸರು ಅಭಿನಯಿಸಿದ ‘ಸ್ಮಶಾನ ಕುರುಕ್ಷೇತ್ರ’ ನಾಟಕ ಗಮನ ಸೆಳೆಯಿತು. ಇಡೀ ಸಭಾಂಗಣದ ತುಂಬ ರಂಗಾಸಕ್ತರು ಕಿಕ್ಕಿರಿದಿದ್ದರು. 

ಗೌರಿಬಿದನೂರು ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ್ ಅವರು ಕೌರವೇಂದ್ರನ  (ದುರ್ಯೋಧನ) ಪಾತ್ರ ನಿರ್ವಹಿಸಿದ್ದರು. ಅವರ ಅಮೋಘ ಅಭಿನಯಕ್ಕೆ ಅಪಾರವಾದ ಮೆಚ್ಚುಗೆ ವ್ಯಕ್ತವಾಯಿತು. ಶಾಸಕರು, ಮಾಜಿ ಶಾಸಕರು, ಹಿರಿಯ ಪೊಲೀಸ್ ಅಧಿಕಾರಿಗಳು ನಾಟಕವನ್ನು ಕಣ್ತುಂಬಿಕೊಂಡರು. ಭಾನು ಪ್ರಕಾಶ್ ನೀನಾಸಂ ನಾಟಕ ನಿರ್ದೇಶಿಸಿದ್ದರೆ, ಸಿದ್ದೇಶ್ ಕಲಾ ವಿನ್ಯಾಸ ಮಾಡಿದ್ದರು.

ಕೇಂದ್ರ ವಲಯದ ಐಜಿಪಿ ರವಿಕಾಂತೇಗೌಡ, ‘ಕುವೆಂಪು ಅವರು ರಚಿಸಿರುವ ಎಲ್ಲ ನಾಟಕಗಳಲ್ಲಿ ಸಾಮಾಜಿಕ ಕಳಕಳಿ ಇದೆ. ಯುದ್ಧಗಳನ್ನು ವಿರೋಧಿಸಿದ್ದರು. ಯುದ್ಧದ ಪರಿಣಾಮಗಳು ಯಾವ ರೀತಿ ಆಗುತ್ತವೆ ಎನ್ನುವುದನ್ನು ತಿಳಿಸಿದ್ದರು. ಯುದ್ಧಗಳ ಅನಾಹುತಗಳ ಬಗ್ಗೆ ಅಂದೇ ಅವರು ನಾಟಕಗಳ ಮೂಲಕ ತಿಳಿಸಿದ್ದರು ಎಂದು ಹೇಳಿದರು.

ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಮಾತನಾಡಿ, ನಾಟಕಕ್ಕಾಗಿ ‌ಹಳೆಗನ್ನಡ ಅಭ್ಯಾಸ ಮಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಪೊಲೀಸರ ಈ ಪ್ರಯತ್ನ ಶ್ಲಾಘನೀಯವಾದುದು. ಸಾಮಾನ್ಯವಾಗಿ ಪೊಲೀಸರು ಒತ್ತಡದಲ್ಲಿಯೇ ಕೆಲಸ ನಿರ್ವಹಿಸುತ್ತಾರೆ. ಈ ಒತ್ತಡದ ರಂಗಾಸಕ್ತಿ ತೋರುತ್ತಿರುವುದು ಒಳ್ಳೆಯದು ಎಂದು ಹೇಳಿದರು.

ಮಾಜಿ ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ಹಾಗೂ ತಾಲ್ಲೂಕಿನ ಅಧಿಕಾರಿಗಳು ನಾಟಕ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT