ಅದಮ್ಯ ಚೇತನ ವಿ.ಕೃ.ಗೋಕಾಕ್

7
ಅಂಕಣಗೊಂದಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಸ್ಮರಣೆ’

ಅದಮ್ಯ ಚೇತನ ವಿ.ಕೃ.ಗೋಕಾಕ್

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಕನ್ನಡ ಸಾಹಿತ್ಯ ಲೋಕಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಸಾಹಿತಿ ವಿ.ಕೃ.ಗೋಕಾಕ್ ಅವರು ಕನ್ನಡ ಸಾಹಿತ್ಯದ ಅದಮ್ಯ ಚೇತನ’ ಎಂದು ಕಾದಂಬರಿಗಾರ್ತಿ ಸರಸಮ್ಮ ಹೇಳಿದರು.

ಚುಟುಕು ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕಿನ ಅಂಕಣಗೊಂದಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಸ್ಮರಣೆ’ ಕಾಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾನವತಾವಾದಿ, ವಿಚಾರವಾದಿ, ವಿಮರ್ಶಕ, ನವ್ಯಕಾವ್ಯದ ಪ್ರವರ್ತಕರೂ ಆಗಿದ್ದ ಗೋಕಾಕ್ ಅವರು ಗಳಗನಾಥರ ಕಾದಂಬರಿಗಳಿಂದ ಪ್ರಭಾವಿತರಾಗಿದ್ದರು. ಭಾರತೀಯ ಸಾಂಸ್ಕೃತಿಕ ಪ್ರತಿನಿಧಿಯಾಗಿ ಹೊರದೇಶಗಳಲ್ಲೂ ಕನ್ನಡದ ಕಂಪನ್ನು ಪಸರಿಸಿದರು. ಗೋಕಾಕ್ ಅವರು 1956ರಲ್ಲಿ ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಗೋಕಾಕ್ ವರದಿ ಜಾರಿಯಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು’ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಶಿವರಾಂ ಮಾತನಾಡಿ, ‘ಮಕ್ಕಳಿಗಾಗಿ ಆಸ್ತಿಯನ್ನು ಮಾಡದೇ ಮಕ್ಕಳನ್ನೇ ಆಸಿಯನ್ನಾಗಿ ಮಾಡಿ ಸಮಾಜದ ಅಭ್ಯುದಯಕ್ಕೆ ಉತ್ತಮ ಪ್ರಜೆಗಳನ್ನಾಗಿ ಪೋಷಕರು ಮಕ್ಕಳನ್ನು ರೂಪಿಸಿದಾಗ ಆದರ್ಶ ಸಮಾಜ ಸಾಧ್ಯ. ಮೊಬೈಲ್, ಟಿವಿಗಳಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಈ ಬಗ್ಗೆ ಪೋಷಕರು ಎಚ್ಚರ ವಹಿಸುವ ಅಗತ್ಯವಿದೆ’ ಎಂದರು.

ಸಾಹಿತಿ ಇಂದುಮತಿ ಮಾತನಾಡಿ, ‘ಕನ್ನಡ ಭಾಷೆಯ ಬಗ್ಗೆ ಅಭಿಮಾನ, ಪ್ರೀತಿ ಅಗತ್ಯ. ನಮ್ಮ ರಾಜ್ಯ ಶಾಂತಿ, ಪ್ರೀತಿ, ವಿಶ್ವಾಸಕ್ಕೆ ತವರೂರಿನಂತಿದೆ. ಅದಕ್ಕಾಗಿಯೇ ಇಲ್ಲಿ ಎಲ್ಲಾ ಜನಾಂಗೀಯರು ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗಿದೆ. ಅನ್ಯ ಭಾಷಿಕರು ಕೂಡ ಕನ್ನಡ ಕಲಿತು ಸೌಹಾರ್ದತೆಯಿಂದ ಬಾಳಬೇಕಿದೆ’ ಎಂದು ಹೇಳಿದರು.

ಶಿವರಾಂ ಅವರು ತಮ್ಮ ಪಾಲಕರ ನೆನಪಿನಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಗ್ರಂಥಾಲಯಕ್ಕೆ ಸಾಹಿತಿಗಳಾದ ಸರಸಮ್ಮ, ಇಂದುಮತಿ, ನಾಗಭೂಷಣರೆಡ್ಡಿ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಚುನಾಪ ತಾಲ್ಲೂಕು ಘಟಕದ ಅಧ್ಯಕ್ಷ ನಾಗಭೂಷಣರೆಡ್ಡಿ, ಪದಾಧಿಕಾರಿಗಳಾದ ರಮಣ್, ಗಂಗರಾಜು, ಶಾಲಾ ಮುಖ್ಯ ಶಿಕ್ಷಕಿ ಪ್ರೇಮಕುಮಾರಿ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !