ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ₹4.80 ಕೋಟಿ ವಶ: ಸ್ವಪಕ್ಷೀಯರಿಂದಲೇ ಅಧಿಕಾರಿಗಳಿಗೆ ಮಾಹಿತಿ?

Published 28 ಏಪ್ರಿಲ್ 2024, 16:34 IST
Last Updated 28 ಏಪ್ರಿಲ್ 2024, 16:34 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರಿಗೆ ಸೇರಿದೆ ಎನ್ನಲಾದ ₹4.80 ಕೋಟಿ ಹಣವನ್ನು ಜಪ್ತಿ ಮಾಡಿದ ಆದಾಯ ತೆರಿಗೆ ಅಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿಗಳಿಗೆ ಈ ಹಣದ ಬಗ್ಗೆ ಸುಳಿವು ನೀಡಿದ್ದೇ ಬಿಜೆಪಿ ಮುಖಂಡರು ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.   

‘ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಲಾಗಿತ್ತು’ ಎನ್ನಲಾದ ₹ 4.80 ಕೋಟಿಯನ್ನು ಆದಾಯ ತೆರಿಗೆ ಮತ್ತು ಚುನಾವಣಾ ಅಧಿಕಾರಿಗಳು ಚುನಾವಣೆ ಹಿಂದಿನ ದಿನ ಬೆಂಗಳೂರಿನ ಮನೆಯೊಂದರಿಂದ ಜಪ್ತಿ ಮಾಡಿದ್ದರು. ಈ ಹಣವನ್ನು ವಾಪಸು ಕೊಡಿಸುವಂತೆ ಡಾ. ಕೆ. ಸುಧಾಕರ್, ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದ ಕುರಿತು ಮಾದನಾಯಕನಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

‘ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾರರಿಗೆ ಹಂಚಲು ಬೆಂಗಳೂರಿನ ಮನೆಯೊಂದರಲ್ಲಿ ₹10 ಕೋಟಿ ಸಂಗ್ರಹಿಸಲಾಗಿದೆ’ ಎಂದು ಚುನಾವಣಾ ಅಧಿಕಾರಿಗಳಿಗೆ ವ್ಯಕ್ತಿಯೊಬ್ಬರು ಕರೆ ಮಾಡಿ ಮಾಹಿತಿ ನೀಡಿದ್ದರು. ಈ ಆಧಾರದಲ್ಲಿ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿದ್ದರು. 

ಮತದಾರರಿಗೆ ಹಂಚಲು ಬೆಂಗಳೂರಿನ ಮನೆಯೊಂದರಲ್ಲಿ ಹಣ ಸಂಗ್ರಹಿಸಿ ಇಡಲಾದ ಬಗ್ಗೆ ಸುಧಾಕರ್‌ ವಿರೋಧಿ ಬಣದ ಬಿಜೆಪಿ ನಾಯಕರೊಬ್ಬರಿಗೆ ಖಚಿತ ಮಾಹಿತಿ ಇತ್ತು. ಆ ನಾಯಕರೇ ದಾಳಿಯ ಹಿಂದಿನ ಹಿಂದಿನ ಸೂತ್ರಧಾರ ಎನ್ನುವ ಮಾತು ಚಿಕ್ಕಬಳ್ಳಾಪುರ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿವೆ. 

‘ಲೋಕಸಭೆ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಜೊತೆಯಲ್ಲಿಯೇ ಇದ್ದರೂ ಬಿಜೆಪಿಯ ಕೆಲವು ಮುಖಂಡರು ಡಾ.ಕೆ.ಸುಧಾಕರ್ ಪರವಾಗಿ ಕೆಲಸ ಮಾಡಲಿಲ್ಲ. ಬಿಜೆಪಿಯ ಪ್ರಮುಖ ನಾಯಕರಿಗಷ್ಟೇ ಹಣದ ಬಗ್ಗೆ ಮಾಹಿತಿ ಇತ್ತು. ಹಿರಿಯ ಆದಾಯ ತೆರಿಗೆ ಮತ್ತು ಚುನಾವಣಾ ಅಧಿಕಾರಿಗಳ ಮೊಬೈಲ್‌ ಸಂಖ್ಯೆಗೆ ಮಾಹಿತಿ ನೀಡಿರುವುದೂ ಅವರೇ’ ಎಂದು ಬಿಜೆಪಿ ಅಭ್ಯರ್ಥಿಯ ಆಪ್ತ ವಲಯದವರೊಬ್ಬರು  ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT