ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಭಾರತ್ ಬ್ರಾಂಡ್ ಅಕ್ಕಿಗೆ ಮುಗಿಬಿದ್ದ ಜನ

Published 3 ಮಾರ್ಚ್ 2024, 15:13 IST
Last Updated 3 ಮಾರ್ಚ್ 2024, 15:13 IST
ಅಕ್ಷರ ಗಾತ್ರ

ಚಿಂತಾಮಣಿ: ಕೇಂದ್ರ ಸರ್ಕಾರ ವಿತರಿಸುವ ಭಾರತ್ ಬ್ರಾಂಡ್ ಅಕ್ಕಿಯನ್ನು ನಗರದಲ್ಲಿ ಭಾನುವಾರ ವಿತರಿಸಲಾಯಿತು. ನಗರದ ಕೋಲಾರ ರಸ್ತೆಯ ಕೆಎಂಡಿ ಕಲ್ಯಾಣ ಮಂಟಪದ ಮುಂದೆ ಭಾರತ್ ಬ್ರಾಂಡ್ ಅಕ್ಕಿಗಾಗಿ ಜನರು ತಾ ಮುಂದು ತಾಮುಂದು ಎಂದು ಮುಗಿಬಿದ್ದರು.

ಒಂದು ಕೆ.ಜಿ ಅಕ್ಕಿಗೆ ₹29ರಂತೆ 10 ಕೆ.ಜಿ ಅಕ್ಕಿಯ ಚೀಲವನ್ನು ₹290ಕ್ಕೆ ಮಾರಾಟ ಮಾಡಲಾಯಿತು. ನಗರದ ಜನರು ಬೈಕ್ ಮತ್ತು ಆಟೊದಲ್ಲಿ ಆಗಮಿಸಿ ಅಕ್ಕಿಯ ಚೀಲಗಳನ್ನು ತೆಗೆದುಕೊಂಡು ಹೋದರು. 10 ಕೆ.ಜಿಯ 3 ಸಾವಿರ ಚೀಲಗಳು ಕೇವಲ 2-3 ಗಂಟೆಯಲ್ಲಿ ಖಾಲಿಯಾಯಿತು. ಹಲವು ಜನರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಗೊಣಗುತ್ತಾ ಬರಿಗೈಲಿ ವಾಪಸ್ ತೆರಳಿದರು.

ಬಿಜೆಪಿ ಮುಖಂಡ ಮಾಡಿಕೆರೆ ಅರುಣ್ ಮಾತನಾಡಿ, ಸಮಗ್ರ ಭಾರತದಲ್ಲಿ ಒಂದೇ ಬ್ರಾಂಡ್‌ನ ಅಡಿಯಲ್ಲಿ ಯೋಜನೆ ಜಾರಿಗೊಳಿಸಿರುವುದು ಬಡವರಿಗೆ ಅನುಕೂಲವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT