ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇಳೂರು | ಖರೀದಿಗೆ ಮುಗಿಬಿದ್ದ ಜನ: ಹೂ, ಹಣ್ಣು ಬೆಲೆ ಏರಿಕೆ

Published 14 ಜನವರಿ 2024, 14:23 IST
Last Updated 14 ಜನವರಿ 2024, 14:23 IST
ಅಕ್ಷರ ಗಾತ್ರ

ಚೇಳೂರು: ಸಂಕ್ರಾಂತಿ ಹಬ್ಬದ ಸಲುವಾಗಿ ಚೇಳೂರು ಪಟ್ಟಣದ ಮಹಾತ್ಮ ಗಾಂಧಿ ವೃತ್ತ, ಚಿಂತಾಮಣಿ ರಸ್ತೆ ಮತ್ತು ಬಾಗೇಪಲ್ಲಿ ರಸ್ತೆ ಸೇರಿದಂತೆ ವಿವಿಧೆಡೆ ಸಾಮಗ್ರಿಗಳ ಮಾರಾಟ, ಖರೀದಿ ಭರ್ಜರಿಯಾಗಿ ನಡೆಯಿತು.

ಸಂಕ್ರಮಣಕ್ಕೆ ಮಹಿಳೆಯರು ಪರಸ್ಪರ ಮೊರದಲ್ಲಿ ಬಾಗಿನ ಕೊಡುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಕಬ್ಬು, ತರಕಾರಿ, ಹೂವುಗಳ ಖರೀದಿ ಜೋರಾಗಿ ನಡೆಯಿತು. ಇದಲ್ಲದೇ ಇದೇ ಸಂದರ್ಭದಲ್ಲಿ ಮಾರುಕಟ್ಟೆಗೆ ಬರುವ ಗಾಣದುಂಡಿಯ ಮಾರಾಟ ವಿಶೇಷವಾಗಿತ್ತು. ಎಳ್ಳು, ಬೆಲ್ಲ ಖರೀದಿ ಜೋರಾಗಿದೆ. ಗ್ರಾಮೀಣ ಪ್ರದೇಶದಲ್ಲಿ ರಾಸುಗಳಿಗೆ ಪೂಜೆ ಸಲ್ಲಿಸಲು ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ.

ಸಂಕ್ರಾಂತಿಯನ್ನು ಗ್ರಾಮೀಣ ಭಾಗದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ರಾಸುಗಳನ್ನು ವಿಶಿಷ್ಟ ಬಣ್ಣಗಳಿಂದ ಅಲಂಕಾರ ಮಾಡಿ ಕಿಚ್ಚು ಹಾಯಿಸಲಾಗುತ್ತದೆ.

ತರಕಾರಿ, ಹೂ, ಹಣ್ಣುಗಳ ಬೆಲೆ ಏರಿಕೆಯಾಗಿದೆ. ತರಕಾರಿ ಬೆಲೆ ₹10 ರಿಂದ ₹20 ಜಾಸ್ತಿಯಾಗಿದೆ.

ಅವರೆಕಾಯಿ ₹80, ಗೆಣಸು ₹40, ಸಂಪಿಗೆ ₹400, ಚೆಂಡು ಹೂ ₹50, ಸೇವಂತಿಗೆ ₹150, ಕಾಕಡ ₹500, ಕನಕಾಂಬರ ₹1,200, ತುಳಸಿ ಮಾರು ₹50,
ಮಲ್ಲಿಗೆ ₹1,600, ಗುಲಾಬಿ ₹150ಕ್ಕೆ ಮಾರಾಟವಾಯಿತು. ಸೇಬು ₹220, ದ್ರಾಕ್ಷಿ ₹120, ದಾಳಿಂಬೆ ₹200, ಸಪೋಟ ₹120, ಮುಸುಂಬಿ ₹120, ಬಾಳೆಹಣ್ಣ ₹70, ಕಬ್ಬು ಜೋಡಿ ₹100ಕ್ಕೆ ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT