ಸೋಮವಾರ, ಜನವರಿ 25, 2021
15 °C

ಟಿಎಪಿಸಿಎಂಎಸ್ ಕಾಂಗ್ರೆಸ್ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಡಿಬಂಡೆ: ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ ಎಲ್ಲಾ 14 ನಿರ್ದೇಶಕರ ಸ್ಥಾನಗಳಲ್ಲೂ ಕಾಂಗ್ರೆಸ್‌ ಬೆಂಬಲಿತರು ಜಯಗಳಿಸಿದ್ದಾರೆ.

‘ಒಟ್ಟು 31 ಅಭ್ಯರ್ಥಿಗಳು ಸ್ವರ್ಧಿಸಿದ್ದರು’ ಎಂದು ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಸಿಗಬತ್‌ ಉಲ್ಲಾ ತಿಳಿಸಿದ್ದಾರೆ.

‘ಬಿ’ ಕ್ಷೇತ್ರದಿಂದ ಮಾಚಹಳ್ಳಿ ಶಿವಣ್ಣ, ಕಡೇಹಳ್ಳಿ ಗಂಗಿರೆಡ್ಡಿ, ಎಚ್. ವೆಂಕಟೇಶಪ್ಪ, ಬ್ರಾಹ್ಮಣರಹಳ್ಳಿ ಎಚ್. ಹನುಮಂತರಾಯಪ್ಪ, ಬೆಣ್ಣೇಪರ್ತಿ ನರಸಿಂಹಪ್ಪ, ಮಾಚಹಳ್ಳಿ ಆದಿನಾರಾಯಣಪ್ಪ, ಚಿಕ್ಕತಮ್ಮನಹಳ್ಳಿ ಪಿ.ಎಸ್. ವೇಣುಗೋಪಾಲ್, ಶಿವಮ್ಮ ಕೆ.ವಿ. ಶ್ರೀರಾಮಯ್ಯ ಹಾಗೂ ಆದಿಲಕ್ಷ್ಮಮ್ಮ ಜಯಗಳಿಸಿದ್ದಾರೆ.

‘ಎ’ ಕ್ಷೇತ್ರದಿಂದ ಹಂಪಸಂದ್ರ ವಿ.ಎಸ್.ಎಸ್.ಎನ್‌ನ ಕೆ.ಜೆ. ಆನಂದರೆಡ್ಡಿ, ಚೌಟಕುಂಟಹಳ್ಳಿ ವಿ.ಎಸ್.ಎಸ್.ಎನ್‌ನ ಗಂಗಾಧರಪ್ಪ, ಪಸುಪಲೋಡು ವಿ.ಎಸ್.ಎಸ್.ಎನ್‌ನ ಚನ್ನಕೇಶವರೆಡ್ಡಿ, ಕಸಬಾ ಸೊಸೈಟಿಯ ಎಂ. ವೆಂಕಟಲಕ್ಷ್ಮಮ್ಮ, ಪೋಲಂಪಲ್ಲಿ ವಿ.ಎಸ್.ಎಸ್.ಎನ್‌ನ‌ ವೆಂಕಟೇಶಪ್ಪ ಜಯಗಳಿಸಿದ್ದಾರೆ.

ಸಹಾಯಕ ಚುನಾವಣಾಧಿಕಾರಿ ಪ್ರೇಮ್‌ಕುಮಾರ್, ಸಂಘದ ಕಾರ್ಯದರ್ಶಿ ಎಸ್. ಅಶ್ವತ್ಥಪ್ಪ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.