ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಮಾಂಗಲ್ಯ ಸರ ಕಿತ್ತುಕೊಂಡು ಕಳ್ಳ ಪರಾರಿ

Published 29 ಜನವರಿ 2024, 15:31 IST
Last Updated 29 ಜನವರಿ 2024, 15:31 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದಲ್ಲಿ ಭಾನುವಾರ ಸಂತೆಯಲ್ಲಿ ಮಹಿಳೆ ತರಕಾರಿ ಖರೀದಿಸುತ್ತಿರುವಾಗ ಕುತ್ತಿಗೆಯಿಂದ ಮಾಂಗಲ್ಯ ಸರ ಕಿತ್ತು ಕಳ್ಳ ಪರಾರಾಯಾಗಿದ್ದಾನೆ.

ನಗರದ ಬುಕ್ಕನಹಳ್ಳಿ ರಸ್ತೆಯ ಚೌಡೇಶ್ವರಿ ಓಣಿಯ ಮಂಜುಳಾ ಸರ ಕಳೆದುಕೊಂಡ ಮಹಿಳೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಜುಳಾ ಪ್ರತಿ ಭಾನುವಾರ ಸಂಜೆ ಸಂತೆಗೆ ಹೋಗಿ ತರಕಾರಿ ಖರೀದಿಸಿ ತರುತ್ತಿದ್ದರು. ಅದರಂತೆ ಭಾನುವಾರ ಸಂಜೆ 6.45ಕ್ಕೆ ಮನೆಯಿಂದ ಹೊರಟು ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ ಬಳಿ ತರಕಾರಿ ಖರೀದಿಸುತ್ತಿದ್ದರು. ಆ ವೇಳೆ ಈ ಘಟನೆ ನಡೆದಿದೆ.

ಮಹಿಳೆ ಕೂಗಿಕೊಂಡಿದ್ದಾರೆ. ಅಕ್ಕಪಕ್ಕದ ಕೆಲವರು ಆರೋಪಿಯನ್ನು ಹಿಂಬಾಲಿಸಿದರೂ ಪರಾರಿಯಾಗಿದ್ದಾನೆ. ಮಾಂಗಲ್ಯ ಸರ 48 ಗ್ರಾಂ ಹಾಗೂ ಅದರಲ್ಲಿ 5 ಗ್ರಾಂನ ಎರಡು ಮಾಂಗಲ್ಯದ ಬೊಟ್ಟುಗಳು ಇದ್ದವು. ಆರೋಪಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ನಗರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT