ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀನಿವಾಸಪುರದಿಂದ ಬೆಳಗಾವಿಯ ಅಧಿವೇಶನದವರೆಗೂ ಪಾದಯಾತ್ರೆ ಹೊರಟಿರುವ ಅಮ್ಜದ್ ಖಾನ್

Published 25 ನವೆಂಬರ್ 2023, 14:38 IST
Last Updated 25 ನವೆಂಬರ್ 2023, 14:38 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿಯಿಂದ ಬೆಳಗಾವಿಯ ಸುವರ್ಣಸೌಧದವರೆಗೂ ಪಾದಯಾತ್ರೆ ಹೊರಟಿರುವ ಅಮ್ಜದ್ ಖಾನ್ ಶನಿವಾರ ಶಿಡ್ಲಘಟ್ಟ ಮೂಲಕ ಹಾದು ಹೋದರು.

ಗೌನಿಪಲ್ಲಿ ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಸ್ಥರು ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಗೌನಿಪಲ್ಲಿ ಗ್ರಾಮ ಪಂಚಾಯಿತಿಯನ್ನು ಪುರಸಭೆ ಮಾಡಬೇಕೆಂಬ ಒತ್ತಾಸೆಯಿಟ್ಟಿದ್ದು, ಅದನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಅಮ್ಜದ್ ಖಾನ್ ತಿಳಿಸಿದರು.

ಜನಸಂಖ್ಯೆ ಅಥವಾ ಮತದಾರರ ಸಂಖ್ಯೆ ಸೇರಿದಂತೆ ಪುರಸಭೆಗೆ ಬೇಕಾದ ಎಲ್ಲಾ ಅರ್ಹತೆ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಹೊಂದಿದೆ. ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದೇವೆ. ಗ್ರಾಮ ಪಂಚಾಯಿತಿಗೆ ಬರುವ ಅನುದಾನಗಳಿಂದ ಅಭಿವೃದ್ಧಿ ಅಷ್ಟಾಗಿ ಆಗುವುದಿಲ್ಲ. ಗ್ರಾಮಸ್ಥರು ಹಾಗೂ ಜನರ ಹಿತದೃಷ್ಟಿಯಿಂದ ಪಾದಯಾತ್ರೆ ಪ್ರಾರಂಭಿಸಿದ್ದೇನೆ.

ಪ್ರತಿ ದಿನ 35 ಕಿ.ಮೀ ನಡೆಯುವ ಗುರಿ ಹೊಂದಿದ್ದೇನೆ. ಶಿಡ್ಲಘಟ್ಟದಿಂದ ಚಿಕ್ಕಬಳ್ಳಾಪುರ, ಮಂಚೇನಹಳ್ಳಿ, ಸಿರಾ, ಮಧುಗಿರಿ, ಚಿತ್ರದುರ್ಗ ಮೂಲಕ ರಾಷ್ಟ್ರೀಯ ಹೆದ್ದಾರಿ ಮುಖೇನ ಬೆಳಗಾಂ ಸೇರುತ್ತೇನೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಸರ್ಕಾರದ ಜನಪ್ರತಿನಿಧಿಗಳಿಗೆ ನಮ್ಮ ಗ್ರಾಮ ಪಂಚಾಯಿತಿಯ ಬಗ್ಗೆ ವಿವರಿಸಿ ಕಳಕಳಿಯಿಂದ ಮನವಿ ಮಾಡುತ್ತೇನೆ. ನಾನು ಡಿಸೆಂಬರ್ 12ಕ್ಕೆ ಅಲ್ಲಿಗೆ ತಲುಪುವ ಗುರಿ ಇದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT