ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ದಿನಾಚರಣೆಯ ಸಂಭ್ರಮ

Last Updated 9 ಮಾರ್ಚ್ 2021, 3:16 IST
ಅಕ್ಷರ ಗಾತ್ರ

ಗುಡಿಬಂಡೆ: ತಾಲ್ಲೂಕಿನ ಹಂಪಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಮದರ್ ತೆರೇಸಾ ಗೈಡ್ಸ್‌ ಘಟಕವನ್ನು ಪ್ರಾರಂಭ ಮಾಡಲಾಯಿತು.

ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಗೈಡ್ಸ್‌ ಆಯುಕ್ತೆ ಮಂಜುಳಾ, ‘ಸ್ಕೌಟ್ಸ್ ಮತ್ತು ಗೈಡ್ಸ್‌ ಎಂಬುದು ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿದೆ. ಈ ಸಂಸ್ಥೆ ಮೂಲಕ 3 ರಿಂದ 21ನೇ ವರ್ಷದವರೆಗಿನ ಮಕ್ಕಳಿಗೆ ದೇಶಪ್ರೇಮ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಜೊತೆಗೆ ಮಕ್ಕಳಲ್ಲಿ ಸೇವಾ ಮನೋಭಾವ ಮೂಡಿಸುವಲ್ಲಿ ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಸಂಸ್ಥೆಯ ಘಟಕವನ್ನು ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರಾರಂಭ ಮಾಡಿ, ಮಕ್ಕಳಲ್ಲಿ ರಾಷ್ಟ್ರಪ್ರೇಮ ಬೆಳೆಸಬೇಕು ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್‌ನ ತಾಲ್ಲೂಕು ಕಾರ್ಯದರ್ಶಿ ಎನ್. ನಾಗಲಿಂಗಪ್ಪ ಮಾತನಾಡಿ, ದೇಶದಲ್ಲಿನ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕಬ್ಸ್, ಬುಲ್‌ಬುಲ್, ಸ್ಕೌಟ್ಸ್‌ ಗೈಡ್ ರೇಂಜರ್, ರೋವರ್‌ಗಳ ಪಾತ್ರ ಅಪಾರವಾಗಿದೆ. ರಾಷ್ಟ್ರಪತಿಯಿಂದ ಪ್ರಶಸ್ತಿ ಪಡೆದು ತಮ್ಮ ಶಾಲೆಗಳಿಗೆ ಗೌರವ ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ಗೈಡ್ಸ್‌ ವಿದ್ಯಾರ್ಥಿಗಳಿಗೆ ಗೈಡ್ಸ್‌ ಪ್ರತಿಜ್ಞೆಯನ್ನು ಗೈಡ್ಸ್‌ ಕ್ಯಾಪ್ಟನ್ ಸುಭಾಷಿಣಿ ಬೋಧನೆ ಮಾಡಿದರು. ಮುಖ್ಯಶಿಕ್ಷಕ ಮಹ್ಮದ್ ಸಮೀಉಲ್ಲಾ, ಸ್ಕೌಟ್ಸ್‌ ಮಾಸ್ಟರ್ ಜಿ. ನಾಗೇಶ್, ಶಿಕ್ಷಕರಾದ ಭೀಮಾನಾಯ್ಕ, ಮಂಜುನಾಥ್, ಕೆ.ಎಂ. ಗಂಗನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT