ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಿ ಬೊಗಳಿದ ವಿಚಾರಕ್ಕೆ ಜಗಳ; ವ್ಯಕ್ತಿ ಮೇಲೆ ಆ್ಯಸಿಡ್ ದಾಳಿ

Published 5 ಡಿಸೆಂಬರ್ 2023, 19:51 IST
Last Updated 5 ಡಿಸೆಂಬರ್ 2023, 19:51 IST
ಅಕ್ಷರ ಗಾತ್ರ

ನರಸಿಂಹರಾಜಪುರ: ನಾಯಿ ಬೊಗಳಿದ ವಿಚಾರಕ್ಕೆ ಸಂಬಂಧಿಸಿದಂತೆ ನೆರೆಹೊರೆಯ ಕುಟುಂಬಗಳ ನಡುವೆ ಆರಂಭಗೊಂಡ ಜಗಳ ತಾರಕಕ್ಕೇರಿ, ವ್ಯಕ್ತಿಯೊಬ್ಬರ ಮೇಲೆ ಆ್ಯಸಿಡ್‌ ಎರಚಿದ ಘಟನೆ ತಾಲ್ಲೂಕಿನ ಹಾಳು ಕರಗುಂದ ಗ್ರಾಮದಲ್ಲಿ ನಡೆದಿದೆ.

ಸುಂದರ್ ರಾಜ್ ಎಂಬುವರು ಆ್ಯಸಿಡ್‌ ದಾಳಿಗೆ ಒಳಗಾದವರು. ಇವರು ನಾಯಿ ಸಾಕಿದ್ದು, ಅದು ಬೊಗಳಿದ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಕದ ಮನೆಯ ಜೇಮ್ಸ್ ಹಾಗೂ ಮರಿಯಮ್ಮ ಎಂಬುವರು ಅವರೊಂದಿಗೆ ಜಗಳವಾಡಿದ್ದರು. ಮಾತಿಗೆ ಮಾತು ಬೆಳೆದು, ಸುಂದರ್ ರಾಜ್ ನಾಯಿ ಹೆಸರಿನಲ್ಲಿ ತಮ್ಮನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಜೇಮ್ಸ್  ಅವರ ಮೇಲೆ ಆ್ಯಸಿಡ್‌ ಎರಚಿದ್ದಾರೆ. ಗಂಭೀರವಾಗಿ ಗಾಯಗೊಂಡ ಸುಂದರ್ ರಾಜ್ ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ನಂತರ ಜೇಮ್ಸ್ ಹಾಗೂ ಮರಿಯಮ್ಮ ತಲೆಮರೆಸಿಕೊಂಡಿದ್ದಾರೆ. ಎನ್‌.ಆರ್‌. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT