ಕೃತಕ ನೆರೆ: ಮನೆಗೆ ನುಗ್ಗಿದ ಮಳೆ ನೀರು

7

ಕೃತಕ ನೆರೆ: ಮನೆಗೆ ನುಗ್ಗಿದ ಮಳೆ ನೀರು

Published:
Updated:
ಮೂಡುಬಿದಿರೆಯ ಅಲಂಗಾರಿನ ಬೈಲಾರೆಯಲ್ಲಿ ಕೃತಕ ನೆರೆಯಿಂದ ಮನೆಗೆ ನುಗ್ಗಿದ ಮಳೆ ನೀರು

ಮೂಡುಬಿದಿರೆ: ಮೂಡುಬಿದಿರೆ ಸುತ್ತಮುತ್ತ ಬುಧವಾರ ರಾತ್ರಿಯಿಂದೀಚೆಗೆ ಸುರಿದ ಭಾರಿ ಗಾಳಿ ಮಳೆಗೆ ಎರಡು ಕಡೆ ಮನೆಯ ಗೋಡೆ ಕುಸಿದು ಬಿದ್ದು ಇಬ್ಬರಿಗೆ ಗಾಯವಾಗಿದೆ.

ಹಂಡೇಲಿನ ಮುಂಡೇಲು ಎಂಬಲ್ಲಿ ಜೈನಾಬಿ ಎಂಬವರ ಮನೆ ನಾಲ್ಕು ಕೋಣೆಗಳ ಮೇಲ್ಚಾವಣೆ ಮತ್ತು ಮತ್ತು ಗೋಡೆ ಕುಸಿದು ಬಿದ್ದು ಮನೆಯಲ್ಲಿದ್ದ ಇಬ್ಬರಿಗೆ ಗಾಯವಾಗಿದೆ.

ಇಲ್ಲಿ ಸುಮಾರು ₹ 2 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಲಂಗಾರಿನ ಬೈಲಾರೆಯಲ್ಲಿ ಕೃಷಿ ಭೂಮಿಯನ್ನು ಸಮತಟ್ಟುಗೊಳಿಸಿದರಿಂದ ಹಲವು ಕಡೆಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಕೆಲವು ಮನೆಗಳಿಗೆ ನೀರು ನುಗ್ಗಿರುವುದು ವರದಿಯಾಗಿದೆ.

ವಿದ್ಯಾಗಿರಿಯಲ್ಲಿ ಹುಲ್ಲು ಹಾಸಿದ ಮಣ್ಣಿ ಜಾಗ ಕುಸಿದು ಬಿದ್ದಿದೆ. ಆದರೆ ರಸ್ತೆ ಸಂಚಾರಕ್ಕೆ ಯಾವುದೇ ತೊಂದರೆ ಆಗಿಲ್ಲ. ಪೊನ್ನೆಚ್ಚಾರಿ ಬಳಿ ಮಳೆ ನೀರು ತಗ್ಗು ಪ್ರದೇಶದಲ್ಲಿರುವ ವಸತಿ ಸಮುಚ್ಚಯದ ಆವರಣಕ್ಕೆ ನುಗ್ಗಿ ಪಾರ್ಕಿಂಗ್‌ ಪ್ರದೇಶ ಜಲಾವೃತಗೊಂಡಿದೆ.

ಇಲ್ಲಿ ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲದಿರುವುದೆ ಘಟನೆಗೆ ಕಾರಣ ಎನ್ನಲಾಗಿದೆ. ಹಿಂದಿನ ಬ್ಯಾರಿಬೊಟ್ಟು ಎಂದು ಕರೆಯುತ್ತಿದ್ದ ಈಗಿನ ವಿಜಯನಗರ ರಸ್ತೆಯಲ್ಲಿ ನೀರು ತುಂಬಿ ಬೆಳಿಗ್ಗೆ ಅಂಗಡಿ ಮುಂಗಟ್ಟುಗಳ ಬಾಗಿಲು ತೆರಯಲು ತೊಂದರೆ ಆಗಿತ್ತು.

ಹೆಚ್ಚಿನ ಕಡೆ ಮಳೆ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದೆ ಕೃತಕ ನೆರೆ ಸೃಷ್ಟಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !