ಜಿಲ್ಲೆಗೆ ವಾಜಪೇಯಿ ಭೇಟಿ ನೆನಪಿನಂಗಳ

7

ಜಿಲ್ಲೆಗೆ ವಾಜಪೇಯಿ ಭೇಟಿ ನೆನಪಿನಂಗಳ

Published:
Updated:
Deccan Herald

ಚಿಕ್ಕಮಗಳೂರು: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಜಿಲ್ಲೆಗೆ ಒಂದೆರಡು ಬಾರಿ ಭೇಟಿ ನೀಡಿದ್ದಾರೆ.

ಶಾಸಕ ಸಿ.ಟಿ.ರವಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ವಾಜಪೇಯಿ ಅವರು 1977ರಲ್ಲಿ ಭೇಟಿ ನೀಡಿದ್ದಾರೆ. ಜನತಾ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಭಾಷಣ ಮಾಡಿದ್ದಾರೆ. ಜನತಾ ಪಕ್ಷದಿಂದ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿ.ಎಲ್‌.ಸುಬ್ಬಮ್ಮ , ಮೂಡಿಗೆರೆಯಲ್ಲಿ ಸಗುನಯ್ಯ ಸ್ಪರ್ಧೆ ಮಾಡಿದ್ದರು’ ಎಂದರು.

‘1991ರಲ್ಲಿ ಚಿಕ್ಕಮಗಳೂರಿಗೆ ಬಂದಿದ್ದರು, ಆಗ ಪಕ್ಷಕ್ಕೆ ನಿಧಿ ಸಂಗ್ರಹ ಮಾಡಿಕೊಟ್ಟಿದ್ದೆವು. ಆ ಸಂದರ್ಭದಲ್ಲಿ ಜಿಲ್ಲಾ ಆಟದ ಮೈದಾನದಲ್ಲಿ ಸಭೆ ನಡೆದಿತ್ತು’ ಎಂದು ತಿಳಿಸಿದರು.

‘ವಾಜಪೇಯಿ ಅವರು ಎನ್‌.ಆರ್.ಪುರ ಮಾರ್ಗವಾಗಿ ವಾಹನದಲ್ಲಿ ತೆರಳುತ್ತಿದ್ದಾಗ ಅಗ್ರಹಾರದ ಗಣಪತಿ ಕಟ್ಟೆ ಬಳಿ ಬಿಜೆಪಿ ಮುಖಂಡರು ಅವರಿಗೆ ಹಾರ ಹಾಕಿದ್ದರು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎನ್‌.ಜೀವರಾಜ್ ನೆನಪಿಸಿಕೊಂಡರು.

‘ವಾಜಪೇಯಿ ಅವರು ಶೃಂಗೇರಿಗೆ ಭೇಟಿ ನೀಡಿದ್ದರು. ಶಾರದಾ ಪೀಠದ ಭಾರತೀ ತೀರ್ಥ ಸ್ವಾಮೀಜಿ ಅವರ ದರ್ಶನ ಮಾಡಿದ್ದರು’ ಎಂದು ಆರ್ಎಸ್‌ಎಸ್‌ ಮುಖಂಡ ಶೃಂಗೇರಿಯ ಶ್ರೀಕಾಂತ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !