ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪರನ್ನು ಮಾತನಾಡದಂತೆ ತಡೆದಿರುವುದು ಅತೀವ ನೋವಾಗಿದೆ: ಶಾಸಕ

Last Updated 16 ಮಾರ್ಚ್ 2023, 13:35 IST
ಅಕ್ಷರ ಗಾತ್ರ

ಮೂಡಿಗೆರೆ: ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಅವರು ಮೂಡಿಗೆರೆಗೆ ಬಂದಾಗ ಪಕ್ಷದ ಕೆಲ ಕಾರ್ಯಕರ್ತರು ಅವಮಾನ ಮಾಡುವ ರೀತಿ ವರ್ತಿಸಿರುವುದು ನನ್ನ ಮನಸ್ಸಿಗೆ ಬೇಸರ ತರಿಸಿದೆ. ನನ್ನ ಏಳಿಗೆ ಸಹಿಸದವರು ನನ್ನ ವಿರುದ್ಧ ಬಾವುಟ ಹಿಡಿದು ಯಡಿಯೂರಪ್ಪ ಅವರನ್ನು ಮಾತನಾಡದಂತೆ ತಡೆದಿರುವುದು ಅತೀವ ನೋವು ಆಗಿದೆ’ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಕಣ್ಣೀರಿಟ್ಟರು.

ಗುರುವಾರ ಸಂಜೆ ಪಕ್ಷದ ಬೆಂಬಲಿಗರೊಂದಿಗೆ ಮೂಡಿಗೆರೆಯಲ್ಲಿ ಮೆರವಣಿಗೆ ನಡೆಸಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಯಡಿಯೂರಪ್ಪ ಅವರು ನನಗೆ ಸಮಾಧಾನ ಹೇಳಿ, ನಿನಗೆ ಈ ಬಾರಿ ಟಿಕೆಟ್ ಎಂದು ಹೇಳಿದ್ದಾರೆ. ಜನರು ನನಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ. ಕೆಲವರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ನನಗೆ ಟಿಕೆಟ್ ನೀಡದಂತೆ ಮಾಡುತ್ತಿದ್ದಾರೆ. ಇದು ಒಳ್ಳೆಯ ನಡವಳಿಕೆಯಲ್ಲ. ಎಲ್ಲ ಕೆಲಸಗಳನ್ನು ಮಾಡಿದ್ದು ನಾನು. ಆದರೆ, ಪಕ್ಷ ಅಂತ ಹೇಳುತ್ತಾ ಬಂದಿದ್ದೇನೆ. ನನಗೆ ಕುಟುಂಬ ಇಲ್ಲ. ಮೂಡಿಗೆರೆಗೆ ನಿಸ್ವಾರ್ಥ ಸೇವೆ ನೀಡಿದ್ದೇನೆ. ನನ್ನನ್ನು ತುಳಿಯುವಂತಹ ಷಡ್ಯಂತ್ರ ನಡೆಯುತ್ತಿದೆ. ನಾನು ಪರಿಶಿಷ್ಟನೆಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ’ ಎಂದು ಹೇಳಿದರು.

ಕಾಂಗ್ರೆಸ್ ಕಡೆ ಮುಖ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೇರೆ ಪಕ್ಷಕ್ಕೆ ನಾನು ಹೋಗಲ್ಲ. ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ಅವರ ನಿರ್ದೇಶನದಂತೆ ನಾನು ಪಕ್ಷಕ್ಕಾಗಿ ದುಡಿಯುತ್ತೇನೆ. ನಾನು ಸಾರ್ವಜನಿಕವಾಗಿ ಕೆಲಸ ಮಾಡುತ್ತೇನೆಯೇ ಹೊರತು ಯಾರ ಬಗ್ಗೆಯೂ ದ್ವೇಷದ ಮನೋಭಾವ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT