ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ಪ್ರೇಮದ ‘ಅಕ್ಟೋಬರ್‌’

Last Updated 12 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಸ್ಟೂಡೆಂಟ್ ಆಫ್ ದಿ ಇಯರ್’ ಸಿನಿಮಾದ ಮೂಲಕ ಭರವಸೆಯ ನಟ ಎನಿಸಿಕೊಂಡಿರುವ ವರುಣ್ ಧವನ್ ಅಭಿನಯದ ‘ಅಕ್ಟೋಬರ್’ ಹೆಸರಿನ ಭಿನ್ನ ಪ್ರೇಮ ಕಥೆಯ ಸಿನಿಮಾ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಸಿನಿಮಾದ ಟ್ರೇಲರ್ ಸೋಮವಾರ ಬಿಡುಗಡೆಯಾಗಿದೆ.

ಸ್ಟಾರ್ ಹೋಟೆಲೊಂದರಲ್ಲಿ ಕೆಲಸ ಮಾಡುವ ಯುವಕ–ಯುವತಿಯ ನಡುವಿನ ಪ್ರೇಮಕಥೆ ಹೊಂದಿರುವ ಈ ಸಿನಿಮಾದಲ್ಲಿ ವರುಣ್ ಧವನ್ ಅಭಿನಯ ಮನಮುಟ್ಟುವಂತಿದೆ ಎಂಬುದನ್ನು ಟ್ರೇಲರ್ ಹೇಳುತ್ತದೆ. ವರುಣ್‌ಗೆ ನಾಯಕಿಯಾಗಿ ಬನಿತಾ ಸಂಧು ಎನ್ನುವ ಹೊಸ ಹುಡುಗಿ ಕಾಣಿಸಿಕೊಂಡಿದ್ದಾರೆ.

ಬಿಡಿಬಿಡಿಯ ಭಿನ್ನ ಭಾವಬಿಂಬಗಳು ಟ್ರೇಲರ್ ಉದ್ದಕ್ಕೂ ಹಾದು ಹೋಗುತ್ತವೆ. ಅಷ್ಟಕ್ಕೂ ಈ ಸಿನಿಮಾಕ್ಕೆ ‘ಅಕ್ಟೋಬರ್’ ಅಂತ ಏಕೆ ಹೆಸರಿಟ್ಟರು, ಆ ತಿಂಗಳಲ್ಲಿ ನಡೆದಿದ್ದಾರೂ ಏನು ಎಂಬ ಕುತೂಹಲ ಉಳಿಸಿಕೊಂಡೇ 2.23 ನಿಮಿಷಗಳ ಟ್ರೇಲರ್ ಮುಕ್ತಾಯವಾಗುತ್ತದೆ. ‘ಅಕ್ಟೋಬರ್’ ಸಿನಿಮಾ ಬಿಡುಗಡೆಯಾಗುತ್ತಿರುವುದು ಏಪ್ರಿಲ್‌ನಲ್ಲಿ. ಸಿನಿಮಾ ನಿರ್ದೇಶನ ಶೂಜಿತ್ ಸಿರ್ಕಾರ್. ಚಿತ್ರಕ್ಕೆ ಕಥೆ ಬರೆದಿದ್ದಾರೆ ಜ್ಯೂಹಿ ಚತುರ್ವೇದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT