ಚಿಕ್ಕಮಗಳೂರು: ನಗರದ ಜಿಲ್ಲಾ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ತೆರೆ ಬಿದ್ದಿದ್ದು, ಮೂರು ದಿನಗಳ ಚೈತ್ರೋತ್ಸವವನ್ನು 5 ಲಕ್ಷ ಜನ ಕಣ್ತುಂಬಿಕೊಂಡಿದ್ದಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ಚೈತ್ರೋತ್ಸವವನ್ನು ಮೂರು ದಿನಗಳ ಕಾಲ ಜನ ಮುಗಿಬಿದ್ದು ವೀಕ್ಷಿಸಿದರು. ಮೊದಲ ದಿನ ಅಂದಾಜು 1.50 ಲಕ್ಷ ಜನ, ಎರಡನೇ ದಿನವೂ 1.50 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.

ಕೊನೆಯ ದಿನವಾದ ಬುಧವಾರ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಂಡಿದ್ದಾರೆ. ಸಿರಿಧಾನ್ಯಗಳಿಂದ ಶಾರದಾಂಬೆ ಮೂರ್ತಿ, ಸಾಲುಮರದ ತಿಮ್ಮಕ್ಕ ಹಾಗೂ ಕರ್ನಾಟಕ ನಕ್ಷೆ ಅನಾವರಣಗೊಂಡಿದ್ದವು. ವಿವಿಧ ಬಣ್ಣಗಳ ಸುಮಾರು 8 ಸಾವಿರ ಹೂಕುಂಡಗಳ ಜೋಡಣೆ, ಇಕೇಬಾನ ಮಾದರಿಯ ಹೂವಿನ ಜೋಡಣೆ, ಪ್ರಸಿದ್ಧ ಕಲಾವಿದರಿಂದ ತರಕಾರಿಗಳಲ್ಲಿ ಪ್ರಾಣಿ-ಪಕ್ಷಿಗಳ ಕೆತ್ತನೆಯ ಕಲಾಕೃತಿಗಳು, ತೆಂಗಿನ ಗರಿಗಳನ್ನು ಬಳಕೆ ಮಾಡಿ ಜಾನೂರು ಆರ್ಟ್ ಹಾಗೂ ಕಾಫಿ ಗಿಡಗಳನ್ನು ಬಳಕೆ ಮಾಡಿಕೊಂಡು ಅಲಂಕೃತ ದ್ವಾರ ನಿರ್ಮಾಣ ಮಾಡಿದ್ದು ಎಲ್ಲರ ಆಕರ್ಷಣೆ ಹೆಚ್ಚಿಸಿತ್ತು.

ಮೊದಲ ದಿನ ಉದ್ಘಾಟನಾ ಕಾರ್ಯಕ್ರಮ ನಡೆದರೆ, ಎರಡನೇ ದಿನ ಜಾನುವಾರು ಪ್ರದರ್ಶನ ಏರ್ಪಡಿಸಲಾಗಿತ್ತು. ಮೂರನೇ ದಿನ ಫಲಪಾಕ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ‘19 ಮಹಿಳೆಯರು ಹಾಗೂ ಪುರುಷರು ಫಲಪಾಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಪ್ರಸ್ತುತ ಪಡಿಸಿರುವುದು ಸಂತಸ ತಂದಿದೆ’ ಎಂದರು.

‘ಪಾಶ್ಚಾತ್ಯ ಆಹಾರಗಳತ್ತ ಮುಖಮಾಡುತ್ತಿರುವ ಸಂದರ್ಭದಲ್ಲಿ ದೇಶೀಯ ಆರೋಗ್ಯ ಪೂರ್ಣ ಆಹಾರ ಪದ್ಧತಿಯ ಬಗ್ಗೆ ಜನರ ಆಸಕ್ತಿ ಹೆಚ್ಚಿಸಬೇಕಿದೆ. ಪೈನಾಪಲ್ ಪಲಾವ್, ಬಾಳೇಹಣ್ಣು ರಸಾಯನ, ಕಿವಿಹಣ್ಣಿನ ಕೇಕ್, ಎಳ್ಳು ಹೋಳಿಗೆ, ಕಡುಬು ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು’ ಎಂದು ಹೇಳಿದರು.

ಜಿ.ಪಂ. ಉಪಕಾರ್ಯದರ್ಶಿ(ಅಭಿವೃದ್ಧಿ) ಗೌರವಕುಮಾರ ಶೆಟ್ಟಿ, ಯೋಜನಾ ನಿರ್ದೇಶಕಿ ಸುಜಾತಾ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಮಂಗಳಾ, ಯೋಜನಾಧಿಕಾರಿ ಮಂಜುನಾಥ್, ಆಯುಷ್ ಇಲಾಖೆಯ ಡಾ. ಗೀತಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸೀಮಾ ಇದ್ದರು.

ಫಲಪಾಕ ಸ್ಪರ್ಧೆ: ವಿಜೇತರಿಗೆ ಬಹುಮಾನ

ಫಲಪಾಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಿಕ್ಕಮಗಳೂರಿನ ಸುಹಾನಾ ಪ್ರಥಮ ರೋಹಿತ್ ದ್ವಿತೀಯ ಹಾಗೂ ನೇರಲಕರೆ ಅನುಪಮ ಅವರು ತೃತೀಯ ಸ್ಥಾನ ಪಡೆದುಕೊಂಡರು. ಹಣ್ಣಿನಿಂದಲೇ ವಿವಿಧ ರೀತಿಯ ಪೇಯ ಸಲಾಡ್ ಪಲಾವ್ ಬಾಳೆಹಣ್ಣಿನ ಕೇಕ್ ಸೇಬಿನ ಐಸ್ಕ್ರೀಂ ಹಣ್ಣಿನ ಹೋಳಿಗೆ ಡ್ರೈಫ್ರೂಟ್ಸ್ ರೋಲ್ ಕರ್ಬೂಜ ಪಪ್ಪಾಯ ಹಲ್ವಾ ಸೇರಿ ಹಲವು ಹಣ್ಣುಗಳಿಂದ ಫಲಪಾಕ ತಯಾರಿಸಲಾಗಿತ್ತು. ತೀರ್ಪುಗಾರರು ಒಮ್ಮೆ ಪರಿಶೀಲಿಸಿದರು. ಮೊದಲ ಬಹುಮಾನ ₹5 ಸಾವಿರ ಎರಡನೇ ಬಹುಮಾನ ₹3 ಸಾವಿರ ಮತ್ತು ತೃತೀಯ ಬಹುಮಾನ ₹2 ಸಾವಿರ ವಿತರಿಸಲಾಗುವುದು ಎಂದು ಎಚ್.ಎಸ್. ಕೀರ್ತನಾ ತಿಳಿಸಿದರು.